ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪ್ರಸ್ತಾವನೆಗೆ ಅನುಗುಣವಾಗಿ ಅನುದಾನ ಹಂಚಿಕೆ

Mainashree
Updated On : 21 May 2014, 11:46 am

ಕೋಲಾರ: ಜಿಲ್ಲಾ ಪಂಚಾಯಿತಿ ಸದಸ್ಯರ ಗಮನಕ್ಕೆ ತರದೆ ವಿವಿಧ ಇಲಾಖೆಗಳ ಕಾರ್ಯಕ್ರಮಕ್ಕೆ ಲಿಂಕ್ ಡಾಕ್ಯುಮೆಂಟ್ ಅನ್ವಯ ಅನುದಾನ ನಿಗದಿ ಮಾಡಲಾಗಿದೆ ಎಂದು ಜಿಪಂ ವಿವಿಧ ಸ್ಥಾಯಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
2014-14ನೇ ಸಾಲಿನ ಜಿಪಂ ಯೋಜನಾ ಕಾರ್ಯಕ್ರಮಗಳ ಇಲಾಖಾವಾರು ಅನುದಾನಗಳ ಕುರಿತು ಸಿದ್ಧಪಡಿಸಿರುವ ಕ್ರಿಯಾ ಯೋಜನೆಯ ಕರಡು ಬಗ್ಗೆ ಚರ್ಚಿಸಿಲು ಬುಧವಾರ ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆರೋಪ ಕೇಳಿ ಬಂತು.
ಜಿಪಂ ಸದಸ್ಯ ಆರ್.ನಾರಾಯಣರೆಡ್ಡಿ, ಬಿ.ವಿ.ಕೃಷ್ಣಪ್ಪ, ಮುತ್ಯಾಲಮ್ಮ, ಅ.ಮು.ಲಕ್ಷ್ಮೀನಾರಾಯಣ ಅವರು ತಮ್ಮ ಕ್ಷೇತ್ರಗಳಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕೆಲಸಕ್ಕೆ ಸಂಬಂಧಿಸಿದಂತೆ ಲಿಂಕ್ ಡಾಕ್ಯುಮೆಂಟ್ ಅನ್ವಯ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಗೆ ನಿಗದಿ ಮಾಡಿರುವ ಅನುದಾನದ ಕುರಿತ ಅತೃಪ್ತಿ ವ್ಯಕ್ತಪಡಿಸಿದರು. ಅಧಿಕಾರಿಗಳು ಸದಸ್ಯರ ಅಭಿಪ್ರಾಯವಿಲ್ಲದೆ ಕರಡು ಸಿದ್ಧಪಡಿಸಿದ್ದಾರೆ. ನಮ್ಮ ಸಲಹೆಗಳನ್ನು ಪರಿಗಣಿಸಿ ಪರಿಷ್ಕೃತ ಕ್ರಿಯಾ ಯೋಜನೆಯನ್ನು ಮೇ 24ರೊಳಗೆ ಸಿದ್ಧಪಿಡಿಸಿ ಮೇ 26ರಂದು ನಡೆಯುವ ಜಿಪಂ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯಬೇಕೆಂದು ತಾಕೀತು ಮಾಡಿದರು.
26ಕ್ಕೆ ಅನುಮೋದನೆ
ರಾಜ್ಯ ವಲಯದ 69,93,62,000 ಹಾಗೂ ಕೇಂದ್ರ ವಲಯದ 8,24, 23,000 ಸೇರಿ ಒಟ್ಟು 78,17,85,000 ಕರಡು ಸಿದ್ಧಪಡಿಸಲಾಗಿದೆ. ಈ ಕರಡನ್ನು ಬುಧವಾರ ನಡೆದ ಸಭೆಯಲ್ಲಿ ಜಿಪಂ ಸಿಇಒ ವಿನೋತ್‌ಪ್ರಿಯಾ ಮಂಡಿಸಿದರು. ಆದರೆ, ಇದಕ್ಕೆ ವಿವಿಧ ಸ್ಥಾಯಿ ಸಮಿತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ತಾವು ನೀಡಿ ಪ್ರಸ್ತಾವನೆಗಳಿಗೆ ಅನುಗುಣವಾಗಿ ಅನುದಾನ ಹಂಚಿಕೆ ಮಾಡಿಲ್ಲ. ಹಾಗಾಗಿ ಪರಿಷ್ಕೃತ ಕ್ರಿಯಾ ಯೋಜನೆಗೆ ಮೇ 26ರಂದು ಅನುಮೋದನೆ ಪಡೆಯುವಂತೆ ಆಗ್ರಹಿಸಿದರು. 2013-14ನೇ ಸಾಲಿನಲ್ಲಿ 55,47,80,000 ಕ್ರಿಯಾ ಯೋಜನೆ ಮಂಡಿಸಲಾಗಿತ್ತು. ಈ ಬಾರಿ ಅನುದಾನ ಗಾತ್ರ 22.70 ಕೋಟಿ ಹೆಚ್ಚಾಗಿದೆ. ಸಣ್ಣ ಪುಟ್ಟ ವ್ಯತ್ಯಾಸಗಳು ಇದ್ದಲ್ಲಿ ಸರಿಪಡಿಸಿ ಸಾಮಾನ್ಯ ಸಭೆಯಲ್ಲಿ ಕರಡು ಪ್ರತಿಗೆ ಅನುಮೋದನೆ ಪಡೆಯಲಾಗುವುದೆಂದು ಜಿಪಂ ಸಿಇಒ ವಿನೋತ್‌ಪ್ರಿಯಾ ತಿಳಿಸಿದರು.
ಇಲಾಖಾವಾರು ಅನುದಾನ
2014-14ನೇ ಸಾಲಿನ ಜಿಪಂ ಯೋಜನಾ ಕಾರ್ಯಕ್ರಮಗಳ ಇಲಾಖಾವಾರು ಅನುದಾನಗಳ ಕುರಿತು ಕರಡು ಪಟ್ಟಿಯಲ್ಲಿನ ವಿವಿರ ಈ ರೀತಿ ಇದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ರಾಜ್ಯ ವಲಯದ 39.39 ಕೋಟಿ, ಕೇಂದ್ರದ 60 ಲಕ್ಷ ಸೇರಿ ಒಟ್ಟು 39.99 ಕೋಟಿ. ಲೋಕಶಿಕ್ಷಣ, ಸಾಮಾನ್ಯ ಶಿಕ್ಷಣಕ್ಕೆ ರಾಜ್ಯದಿಂದ 6 ಲಕ್ಷ, ಕೇಂದ್ರದಿಂದ ಶೂನ್ಯ, ಕ್ರೀಡೆ ಮತ್ತು ಯುವ ಜನ ಸೇವೆಗಳಿಗೆ ರಾಜ್ಯದಿಂದ 30.04 ಲಕ್ಷ, ಕೇಂದ್ರದಿಂದ ಶೂನ್ಯ, ವೈದ್ಯಕೀಯ ಮತ್ತು ಅನಾರೋಗ್ಯ ಸೇವೆಗಳಿಗೆ ರಾಜ್ಯದಿಂದ 2.64 ಕೋಟಿ, ಕೇಂದ್ರದಿಂದ ಶೂನ್ಯ. ಆಯುರ್ವೇದ, ಯೋಗ, ಯುನಾನಿ, ಸಿದ್ಧ ಹೋಮಿಯೋಪತಿಗೆ ರಾಜ್ಯದಿಂದ 41.50 ಲಕ್ಷ, ಕೇಂದ್ರದಿಂದ ಶೂನ್ಯ. ಕುಟುಂಬ ಕಲ್ಯಾಣ ಕಾರ್ಯಕ್ರಮಗಳಿಗೆ ರಾಜ್ಯದಿಂದ 39.19 ಲಕ್ಷ, ಕೇಂದ್ರದಿಂದ 7.56 ಕೋಟಿ ಸೇರಿ ಒಟ್ಟು 7.95 ಕೋಟಿ. ಗ್ರಾಮೀಣ ನೀರು ಪೂರೈಕೆಗೆ ಯಾವುದೇ ಅನುದಾನ ತೋರಿಸಿಲ್ಲ.
ಪರಿಶಿಷ್ಟ ಜಾತಿ, ಪ.ವರ್ಗಗಳ ಕಲ್ಯಾಣಕ್ಕೆ ರಾಜ್ಯದಿಂದ 2.92 ಕೋಟಿಗೆ ಕೇಂದ್ರದ 1.60 ಕೋಟಿ ಸೇರಿ ಒಟ್ಟು 2.94 ಕೋಟಿ. ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ರಾಜ್ಯದ 3.10 ಕೋಟಿ, ಕೇಂದ್ರದಿಂದ ಶೂನ್ಯ. ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ 12.55 ಕೋಟಿ, ಕೃಷಿಗೆ 63ಲಕ್ಷ, ತೋಟಗಾರಿಕೆಗೆ 41.37ಲಕ್ಷ,ಪಶುಸಂಗೋಪನೆಗೆ 71.50 ಲಕ್ಷ, ಮೀನುಗಾರಿಕೆಗೆ 30 ಲಕ್ಷ, ಅರಣ್ಯಕ್ಕೆ 50 ಲಕ್ಷ, ಸಹಕಾರ ಕ್ಷೇತ್ರಕ್ಕೆ 8.80ಲಕ್ಷ, ಪ್ರದೇಶಾಭಿವೃದ್ಧಿಗೆ 1.13 ಕೋಟಿ, ಗ್ರಾಮೀಣ ಇಂಧನ ಕಾರ್ಯಕ್ರಮಕ್ಕೆ ರಾಜ್ಯದಿಂದ 2 ಲಕ್ಷ ಹಾಗೂ ಕೇಂದ್ರದ 6 ಲಕ್ಷ ಸೇರಿ ಒಟ್ಟು 8 ಲಕ್ಷ ಅನುಮಾದನ ನಿಗದಿ ಪಡಿಸಲಾಗಿದೆ. ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅನುದಾನಕ್ಕಾಗಿ 56 ಲಕ್ಷ, ಗ್ರಾಮೋದ್ಯಯ ಮತ್ತು ಸಣ್ಣ ಉದ್ಯಮಕ್ಕೆ 22 ಲಕ್ಷ, ರೇಷ್ಮೆಗೆ 26.50 ಲಕ್ಷ, ರಸ್ತೆ ಮತ್ತು ಸೇತುವೆಗಳಿಗೆ 2.18 ಕೋಟಿ, ಜಿಲ್ಲಾ ಯೋಜನೆ ಘಟಕದ ಸಚಿವಾಲಯ ಆರ್ಥಿಕ ಸೇವೆಗಳಿಗೆ 11.10 ಲಕ್ಷ, ಕೈಮಗ್ಗ ಮತ್ತು ಜವಳಿಗೆ 13.50ಲಕ್ಷ, ವಿಜ್ಞಾನ ಮ್ತತು ತಂತ್ರಜ್ಞಾನಕ್ಕೆ 4 ಲಕ್ಷ, ಕಲೆ ಮತ್ತು ಸಂಸ್ಕೃತಿಗೆ ಕೇವಲ 2 ಲಕ್ಷ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಕ್ಕೆ 10.50ಲಕ್ಷ, ಅಲ್ಪಸಂಖ್ಯಾತರ ಕಲ್ಯಾಣಕ್ಕೆ 51.50 ಲಕ್ಷ ರಾಜ್ಯ ವಲಯದಿಂದ ಅನುದಾನ ನೀಡಲು ಕರಡು ಸಿದ್ಧಪಡಿಸಲಾಗಿದೆ.
ವಿವಿಧ ಇಲಾಖೆಗಳಿಗೆ ನಿಗದಿ ಮಾಡಿರುವ ಅನುದಾನಗಳ ಕುರಿತು ಚರ್ಚಿಸಲು ನಡೆದ ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಅಲುವೇಲಮ್ಮ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ಆನಂದ್, ಜಿಪಂ ಯೋಜನಾ ನಿರ್ದೇಶಕ ಆರೋಕ್ಯಸ್ವಾಮಿ ಸೇರಿ ಅಧಿಕಾರಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement