ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಭೂಗಳ್ಳರು ನಿಜವಾದ ಬುದ್ಧಿಮಾಂದ್ಯರು'

Mainashree
Updated On : 21 May 2014, 11:45 am

ಕೋಲಾರ: ಪ್ರಾಕೃತಿಕ ಹಾಗೂ ದೈಹಿಕ ಸಮಸ್ಯೆಯಿಂದ ಕೆಲವರು ಬುದ್ಧಿಮಾಂದ್ಯರಾಗುತ್ತಾರೆ. ಅಂಗವಿಕತೆಗೆ ಸಿಲುಕುತ್ತಾರೆ. ಆದರೆ, ಈ ವರ್ಗದ ಜನರಲ್ಲಿ ಯಾವುದೇ ಕಲ್ಮಶ, ದುರಾಸೆ, ದಬ್ಬಾಳಿಕೆ ಗುಣಗಳು ಇರುವುದಿಲ್ಲ. ಸಮಾಜ ಇವರನ್ನು ಪ್ರೀತಿಯಿಂದ ನೋಡಿದರೆ ಹೆಚ್ಚು ಕಾಲ ನಮ್ಮ ಜೊತೆ ಇರುತ್ತಾರೆಂದು ನಗರಸಭೆ ಅಧ್ಯಕ್ಷ ಮುಬಾಕರ್ ಅಭಿಪ್ರಾಯಪಟ್ಟರು.
ನಗರದ ಅಂತರಗಂಗೆ ವಿದ್ಯಾ ಸಂಸ್ಥೆಯಲ್ಲಿ ಇಂಚರ ತಂಡದಿಂದ ಬುದ್ಧಿಮಾಂದ್ಯ ಮಕ್ಕಳಿಗಾಗಿ ಏರ್ಪಡಿಸಿರುವ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, 'ನಿಜ ಹೇಳಬೇಕಾದರೆ ದುರಾಸೆಯಿಂದಾಗಿ ಭೂಗಳ್ಳತನ, ಪರಿಸರ ನಾಶದ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿ ರಾತ್ರೋರಾತ್ರಿ ಕುಬೇರರಾಗುವವರೇ ನಿಜವಾದ ಬುದ್ಧಿಮಾಂದ್ಯರು ' ಎಂದು ಅಭಿಪ್ರಾಯಪ್ಟಟರು.  ಇದೇ ಮೊದಲ ಬಾರಿಗೆ ಇಂಚರ ಸಂಸ್ಥೆ ಬುದ್ಧಿ ಮಾಂದ್ಯ ಮಕ್ಕಳಿಗಾಗಿ ಬೇಸಿಗೆ ಶಿಬಿರ ಆಯೋಜಿಸಿದೆ. ಮೇ 25ರವರೆಗೆ ನಡೆಯುವ ಶಿಬಿರದಲ್ಲಿ ಮಕ್ಕಳಿಗೆ ವಿವಿಧ ಸೃಜನಶೀಲ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸವಾಗಬೇಕಾಗಿದೆ ಎಂದರು. ಶಿಬಿರದ ನಿರ್ದೇಶಕ ಇಂಚರ ನಾರಾಯಣಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಕೃಷ್ಣರಾಜು ಅಧ್ಯಕ್ಷತೆ ವಹಿಸಿದ್ದರು. ಅನಿಲ್‌ಕುಮಾರ್, ಕ್ರಿಸ್ತುದಾಸ್, ಕೋಲಾರ ನಗರಸಭಾ ಸದಸ್ಯರಾದ ನದೀಂ ಮತ್ತು ನಿಸಾರ್ ಹಾಗೂ ಪರಸಪ್ಪ ಇದ್ದರು. ಕೆ.ಎಸ್.ಶಂಕರ್ ಸ್ವಾಗತಿಸಿ, ಅನುರಾಧ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement