ಶಾಲೆ ಬಿಟ್ಟ ಮಕ್ಕಳ ವಾಪಸ್ ತರಲು ಕಸರತ್ತು
ಕೋಲಾರ: ಚಿಣ್ಣರ ಅಂಗಳ ಕಾರ್ಯಕ್ರಮದ ಮೂಲಕ ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಯ ಮುಖ್ಯವಾಹಿನಿಗೆ ಕರೆತರುವ ಕಸರತ್ತು ಕೋಲಾರ ತಾಲೂಕಿನ ವೇಮಗಲ್ ಗ್ರಾಮದ ಕ್ಲಸ್ಟರ್ ವ್ಯಾಪ್ತಿಯಲ್ಲಿ ನಡೆದಿದೆ.
ವೇಮಗಲ್ ಸಮೀಪದ ವೀರಾಪುರದಲ್ಲಿ ಶಾಲೆ ಬಿಟ್ಟ ಮಕ್ಕಳ ಮನೆಗೆ ತೆರಳಿದ ಸಮೂಹ ಸಂಪನ್ಮೂಲ ವ್ಯಕ್ತಿಗಳು ಪೋಷಕರನ್ನು ಮನಮೊಲಿಸುವಲ್ಲಿ ಸಫಲರಾಗಿದ್ದಾರೆ.
ಗ್ರಾಮದ ಮುಸವೀರ್ ಪಾಷ ಬಾಲಕ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಕಳೆದ ವರ್ಷ ಶಾಲೆ ಬಿಟ್ಟಿದ್ದ. ಬೀಡಿ ಕಾರ್ಮಿಕರಾದ ತಂದೆ ತಾಯಿ, ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿರುವುದರಿಂದ ಜೀವನ ನಿರ್ವಹಣೆಗಾಗಿ ಬಾಲಕನನ್ನು ವೇಮಗಲ್‌ನಲ್ಲಿ ಮರಗೆಲಸಕ್ಕೆ ಅಟ್ಟಿದ್ದರು.
ಈ ಎಲ್ಲಾ ಮಾಹಿತಿ ಅರಿತ ಸಮೂಹ ಸಂಪನ್ಮೂಲ ವ್ಯಕ್ತಿಗಳ ತಂಡ ಬಾಲಕನ ನಿವಾಸಕ್ಕೆ ತೆರಳಿ ಆತನ ತಂದೆ ಅಬ್ದುಲ್ ಖಲೀಲ್ ಹಾಗೂ ತಾಯಿ ಹಬೀಬಾರನ್ನು ಮನಮೊಲಿಸಿ, ಬಾಲಕನನ್ನು ಮತ್ತೆ ಶಾಲೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೆ.ಶ್ರೀನಿವಾಸ್, ಸಿಆರ್‌ಪಿಗಳಾದ ಬಿ.ಎನ್.ಮಂಜುನಾಥ್, ಬಿ.ಎಸ್.ಮಲ್ಲಿಕಾರ್ಜನಯ್ಯ, ಸಿ.ವಿ.ನಾಗರಾಜ್, ಎಂ.ಕೊಳ್ಳಪ್ಪ, ಹನುಮಾನ್ ಸಿಂಗ್, ನಾಗರಾಜಪ್ಪ, ರಾಜೇಶ್, ರಘುರಾಮಯ್ಯ ಶೆಟ್ಟಿ ಹಾಗೂ ಮುಖ್ಯ ಶಿಕ್ಷಕ ಸದಾನಂದ್ ಇದ್ದರು.