ಹೊಟೇಲ್, ಬೇಕರಿ ಮೇಲೆ ಆಹಾರ ಅಧಿಕಾರಿಗಳ ದಾಳಿ
ಬಂಗಾರಪೇಟೆ: ಪಟ್ಟಣದಲ್ಲಿರುವ ಹೊಟೇಲ್ ಮತ್ತು ಬೇಕರಿ ಅಂಗಡಿಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪುರಸಭೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಶುಚಿತ್ವದ ಬಗ್ಗೆ ಪರಿಶೀಲಿಸಿ ಕಡ್ಡಾಯವಾಗಿ ಕಾನೂನು ನಿಯಮ ಪಾಲಿಸಬೇಕೆಂದು ಎಚ್ಚರಿಕೆ ನೀಡಿದರು.
ಬಂಗಾರಪೇಟೆ ಪಟ್ಟಣದಲ್ಲಿ ಪ್ಲಾಸ್ಟಿಕ್ ಪರಿಪಾತ ಎಂಬ ತಲೆಬರಹದಲ್ಲಿ ಬುಧವಾರ ಕನ್ನಡಪ್ರಭದಲ್ಲಿ ಪ್ರಕಟವಾದ ಸುದ್ದಿಗೆ ಎಚ್ಚತ್ತುಕೊಂಡು ಪುರಸಭೆ ಗುರುವಾರ ಆಹಾರ ಸುರಕ್ಷಿತ ಅಧಿಕಾರಿ ನಾಗರಾಜ್ ಗೂ ಪುರಸಭೆ ಆರೋಗ್ಯ ನಿರೀಕ್ಷಕರಾದ ಗೋವಿಂದರಾಜು ಬಸ್ನಿಲ್ದಾಣ ಸುತ್ತಮುತ್ತಲಿರುವ ಸಣ್ಣಪುಟ್ಟ ಪೆಟ್ಟಿಗೆ ಅಂಗಡಿಗಳನ್ನು ಹಾಗೂ ಬೇಕರಿಗಳನ್ನು ತಪಾಸಣೆ ಮಾಡಿದರು.
ಮೊದಲು ಎಲ್ಲಾ ಅಂಗಡಿಗಳಿಗೆ ಭೇಟಿ ನೀಡಿ ನಿಷೇಧಿತ ಪ್ಲಾಸ್ಟಿಕ್ ಪೇಪರ್ ಬಳಕೆ ಮಾಡದಂತೆ ಈಗಾಗಲೇ ಅಂಗಡಿ ಮಾಲೀಕರ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿದೆಯಾದರೂ ಮತ್ತೆ ಮತ್ತೆ ಬಳಕೆ ಮಾಡುತ್ತಿರುವುದು ವಿಪರ್ಯಾಸವಾಗಿದೆ. ಮೊದಲು ಎಚ್ಚರಿಕೆ ಕೊಡಲಾಗುವುದು .ನಂತರ ಒಂದು ತಿಂಗಳ ಬಳಿಕ ಮತ್ತೆ ತಪಾಸಣೆ ಮಾಡಲಾಗುವುದು ಮತ್ತೆ ಬಳಕೆಯಾದರೆ ಕಂಡಿತವಾಗಿಯೂ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಪುರಸಭೆ ಅಧಿಕಾರಿಗಳು ತಪಾಸಣೆಗೆ ಬರುತ್ತಿರುವ ವಿಷಯ ತಿಳಿದು ಅಂಗಡಿಗಳ ಮಾಲೀಕರು ನಿಷೇಧಿತ ಪ್ಲಾಸ್ಟಿಕ್ ಪೇಪರ್ಗಳನ್ನು ಬಚ್ಚಿಟ್ಟಿದ್ದು ಕಂಡು ಬಂತು.