'ಕರೆಗೆಡುಕ'ನ ಬಂಧನ!
ಮಾಲೂರು: ಮಹಿಳೆಯರಿಗೆ ಕರೆ ಮಾಡಿ ಆಶ್ಲೀಲವಾಗಿ ಮಾತನಾಡಿ ಮಾನಸಿಕ ಹಿಂಸೆ ನೀಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಡೆಂಕಣಿ ಕೋಟೆ ಸಮೀಪದ ಗಿಡ್ಡಗಾನಹಳ್ಳಿನಿವಾಸಿ ನಾರಾಯಣ್(39) ಬಂಧಿತ.
ತನ್ನ ಫೋನಿನಿಂದ ಯಾವೂದೋ ನಂಬರಿಗೆ ಕರೆ ಮಾಡುವುದು, ಆ ಕಡೆಯಿಂದ ಮಹಿಳೆಯರು ಮಾತನಾಡಿದರೆ ಪದೇ ಪದೇ ಆ ನಂಬರಿಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದ. ಇದೇ ರೀತಿಯಲ್ಲಿ ಕಳೆದ ಒಂದು ತಿಂಗಳಿಂದ ಸಿದ್ದನಹಳ್ಳಿಯ ಗೃಹಿಣಿಯೊಬ್ಬಳಿಗೆ ಕರೆ ಮಾಡಿ ಗೋಳು ಹೊಯ್ದುಕೊಳ್ಳುತ್ತಿದ್ದ.
ಆಕೆ ನೀಡಿದ ದೂರಿನ ಅನ್ವಯ ತನಿಖೆ ನಡೆಸಿದ ಇಲ್ಲಿನ ಎಸ್ಐ ದಯಾನಂದ್ ಹಾಗೂ ಪೋಲೀಸರ ತಂಡ ಖಚಿತ ಮಾಹಿತಿ ಮೇರೆಗೆ ತಮಿಳುನಾಡಿನ ಗಿಡ್ಡಗಾನಹಳ್ಳಿಯಲ್ಲಿ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.