ಮತದಾರರಿಗೆ ಅಭಿನಂದನೆ ಸಲ್ಲಿಸಿದ ಮುನಿಯಪ್ಪ
ಚಿಂತಾಮಣಿ: ನೂತನ ಸಂಸದ ಕೆ.ಎಚ್.ಮುನಿಯಪ್ಪ ಅವರು ತಾವು ಗೆಲ್ಲಲು ಸಹಕಾರ ನೀಡಿದ ಮತದಾರರಿಗೂ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೂ, ಮುಖಂಡರಿಗೂ ಅಭಿನಂದೆ ಸಲ್ಲಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಚಿಂತಾಮಣಿ ಕ್ಷೇತ್ರದ ಬೂತ್ ಮಟ್ಟದಿಂದ ನಗರ ಮಟ್ಟದವರೆಗೂ ಪಕ್ಷ ಬಲಪಡಿಸಲಾಗುವುದು. ಮುಂಬರುವ ಗ್ರಾಪಂ, ಜಿಪಂ, ತಾಪಂ ಹಾಗೂ ಕೋಚಿಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಹೇಳಿದರು. ಇದಕ್ಕೂ ಮುನ್ನ ಮುನಿಯಪ್ಪ ಅವರನ್ನು ಬೃಹತ್ ಹೂ ಮಾಲೆ ಹಾಕಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ವಾಣಿಕೃಷ್ಣಾರೆಡ್ಡಿ, ರಾಯಲ್ ರಾಮಕೃಷ್ಣರೆಡ್ಡಿ, ಸಿ.ಎಂ. ಇಬ್ರಾಹಿಂ, ರಾಜಾರಾಮ್,ನರಸಿಂಹರೆಡ್ಡಿ, ಗ್ಯಾಸ್ ಶ್ರೀನಿವಾಸ್, ಆನೂರು ಸುಬ್ಬನ್ನ, ಕುರುಬೂರು ನಟರಾಜ್, ಅಶ್ವತ್ಥರೆಡ್ಡಿ, ಹಾದಿಗೆರೆ ಚೌಡರೆಡ್ಡಿ, ಅಗ್ರಹಾರ ಮುರಳಿ, ನಾರಮಾಕಲಹಳ್ಳಿ ಕೃಷ್ಣ, ಅಲ್ತಾಫ್ ಪಾಷ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.