ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸೋರುತಿಹುದು ಕಾಲೇಜು ಕಟ್ಟಡದ ಮಾಳಿಗೆ..

Mainashree
Updated On : 23 May 2014, 12:09 pm

ಕೋಲಾರ: ನೂರು ವರ್ಷಗಳ ಇತಿಹಾಸ ಹೊಂದಿರುವ ಬ್ರಿಟಿಷರ ಕಾಲದ ಸರ್ಕಾರಿ ಬಾಲಕರ ಕಿರಿಯ ಕಾಲೇಜು ಶಿಥಲಗೊಂಡಿದ್ದು ಪಾಠ-ಪ್ರವಚನಕ್ಕೆ ಮಾತ್ರವಲ್ಲದೆ ವಿದ್ಯಾರ್ಥಿಗಳು ಹಾಗೂ ಭೋದಕರ ಜೀವಕ್ಕೆ ಕುತ್ತುಂಟು ಮಾಡಿದೆ.
ಅತ್ಯಂತ ಹಳೆಯದಾದ ಕಾಲೇಜು ಕಟ್ಟಡವನ್ನು ಕಾಲ ಕಾಲಕ್ಕೆ ದುರಸ್ತಿ ಮಾಡದೆ ನಿರ್ಲಕ್ಷಿಸಿರುವುದರಿಂದ ವಿದ್ಯಾರ್ಥಿಗಳು ನೆಮ್ಮದಿಯಿಂದ ಪಾಠ ಕೇಳಲು ಸಾಧ್ಯವಾಗದಂತಾಗಿದೆ.
ಸದರಿ ಕಾಲೇಜಿನಲ್ಲಿ ಬಡವ ವಿದ್ಯಾರ್ಥಿಗಳು ಒಂದು ಕಾಲದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಲು ಅನುಕೂಲವಾಗಿತ್ತು, ಇಲ್ಲಿ ಓದಿರುವ ಅನೇಕರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಸೌಭಾಗ್ಯ ಸಿಕ್ಕಿದೆ.
ರಾಜ್ಯ ಸರ್ಕಾರ ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡುವ ಭರಾಟೆಯಲ್ಲಿ ಪುರಾತನ ಕಾಲೇಜುಗಳ ಅಭಿವೃದ್ಧಿ ಮರೆತು ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವಂತೆ ಮಾಡುತ್ತಿದೆ. ಕಾಲೇಜಿನ ಬಹುತೇಕ ತರಗತಿ ಕೊಠಡಿಗಳು ಶಿಥಲಗೊಂಡಿದೆ, ಸರ್ಕಾರ ಕಾಲೇಜಿನ ಅಭಿವೃದ್ಧಿಗಾಗಿ ರಚಿಸಿರುವ ಅಭಿವೃದ್ಧಿ ಸಮಿತಿ ಸಹ ಕಾಲೇಜಿನ ಬಗ್ಗೆ ಕಾಳಜಿ ವಹಿಸುತ್ತಿಲ್ಲ, ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಕೊಠಡಿಯ ಚಾವಣಿ ಕುಸಿದಿದೆ, ಗಾರೆ ಮತ್ತು ಇಟ್ಟಿಗೆಗಳು ಕಳಚಿ ಬಿದ್ದಿವೆ. ಸದ್ಯಕ್ಕೆ ಕಾಲೇಜಿಗೆ ರಜೆ ಇರುವುದರಿಂದ ವಿದ್ಯಾರ್ಥಿಗಳು ಪಾರಾಗಿದ್ದಾರೆ. ಜಿಲ್ಲಾ ಆಡಳಿತ ಮತ್ತು ಪಿಯು ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೂಡಲೇ ಕಾಲೇಜಿನ ಕಟ್ಟಡಗಳ ದುರಸ್ತಿ ಮಾಡಿಸದಿದ್ದರೆ ವಿದ್ಯಾರ್ಥಿಗಳಿಗೆ ತೊಂದರೆ ಆಗುವುದಲ್ಲದೆ, ಹೊಸ ಪ್ರವೇಶಕ್ಕೆ ಹಿನ್ನಡೆ ಆಗುತ್ತದೆ ಎಂದು ರಾಷ್ಟ್ರೀಯ ಯುವ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಂಚಾಲಕ ಹೂಹಳ್ಳಿ ನಾಗರಾಜ್ ತಿಳಿಸಿದ್ದಾರೆ. ಕಾಲೇಜಿನಲ್ಲಿ ಗುಣಮಟ್ಟದ ಶೌಚಾಲಯ,ನೀರಿನ ಸೌಕರ್ಯ ಇಲ್ಲದೆ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ, ಕೊಡಲೇ ಅಧಿಕಾರಿಗಳು ಶಿಥಿಲಗೊಂಡಿರುವ ಸರ್ಕಾರಿ ಬಾಲಕರ ಕಿರಿಯ ಕಾಲೇಜು ಸೇರಿದಂತೆ ಜಿಲ್ಲೆಯಲ್ಲಿನ ಎಲ್ಲಾ ಶಿಥಿಲಗೊಂಡಿರುವ ಶಾಲಾ ಕಾಲೇಜುಗಳ ಕೊಠಡಿಗಳನ್ನು ತರಗತಿಗಳ ಪ್ರಾರಂಭಕ್ಕೆ ಮೊದಲೆ ದುರಸ್ತಿ ಮಾಡದಿದ್ದಲ್ಲಿ  ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement