ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅರಹಳ್ಳಿ ಕೆರೆಯಲ್ಲಿ ಮಣ್ಣು ಸಾಗಣೆ ವಿರುದ್ಧ ದೂರು

Mainashree
Updated On : 24 May 2014, 12:12 pm

ಕೋಲಾರ: ತಾಲೂಕಿನ ಅರಹಳ್ಳಿ ಕೆರೆಯಲ್ಲಿ ನಡೆದಿರುವ ಮಣ್ಣು ಸಾಗಾಣೆಯನ್ನು ತಡೆಗಟ್ಟಬೇಕೆಂದು ನಗರಸಭೆ ಅಧ್ಯಕ್ಷ ಮುಬಾಕರ್ ಅವರು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಶುಕ್ರವಾರ ಕೋಡಿಕಣ್ಣೂರು ಕೆರೆಯಲ್ಲಿ ನೀರು ಸರಬರಾಜು ಯೋಜನೆಯ ಕೆಲಸದ ಕಡೆ ಗಮನ ಹರಿಸಿದ್ದ ಸಂದರ್ಭದಲ್ಲಿ ಅರಹಳ್ಳಿ ಕೆರೆಯಲ್ಲಿ ಐದು ಜೆಸಿಬಿ, ಹತ್ತಾರು ಟ್ರ್ಯಾಕ್ಟರ್‌ಗಳು ಇರುವುದನ್ನು ಗಮನಿಸಿದ ಅವರು, ಕಚೇರಿಗೆ ಬಂದ ನಂತರ ದೂರವಾಣಿ ಮೂಲಕ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ, ಕೂಡಲೇ ಮಣ್ಣು ಸಾಗಾಣೆ ನಿಲ್ಲಿಸುವಂತೆ ದೂರು ನೀಡಿದರು.
ಇದಲ್ಲದೆ ಕೋಲಾರ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ ಮುಬಾಕರ್, ನಗರಸಭೆಯ ಆರೋಗ್ಯಾಧಿಕಾರಿಯನ್ನು ಸಂಪರ್ಕಿಸಿ ಕೂಡಲೇ ಪ್ಲಾಸ್ಟಿಕ್ ಮಾರಾಟ ನಿಲ್ಲಿಸುವಂತೆ ತಾಕೀತು ಮಾಡಿದರು. ಯಾವಾಗಲೂ ಒಂದು ಸಾರಿ ಕಾರ್ಯಾಚರಣೆ ನಡೆಸಿದರೆ ಸಾಲದು ಎಂದು ತಿಳಿಸಿದರು.
ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಕ್ರಮಗಳ ವರದಿ ಸಲ್ಲಿಸುವಂತೆ ಶನಿವಾರ ತಮಗೆ ವರದಿ ಸಲ್ಲಿಸಬೇಕೆಂದು ಸೂಚಿಸಿದರು. ನಗರದಲ್ಲಿ ಪ್ರತಿದಿನ 80ರಿಂದ 90 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಇರುತ್ತದೆ. ತ್ಯಾಜ್ಯ ವಿಲೇವಾರಿಗೆ ಜಾಗ ಸಿಗದಿರುವುದರಿಂದ ಕಸ ನಗರವನ್ನು ವ್ಯಾಪ್ತಿಸಿಕೊಳ್ಳುವಂತಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ ಅವರು, ಗದ್ದೆ ಕಣ್ಣೂರಿನಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಅಗತ್ಯವಿರುವಷ್ಟು ಭೂಮಿಯನ್ನು ಹುಡುಕಲಾಗುತ್ತಿದೆ. ಜಿಲ್ಲಾಧಿಕಾರಿಗಳು ಬೇಗನೆ ಭೂಮಿಯನ್ನು ನೀಡಿದಲ್ಲಿ ಘಟಕ ಸ್ಥಾಪನೆ ಮಾಡುವುದಾಗಿ ಮುಬಾಕರ್ ಅವರು ತಮ್ಮನ್ನು ಭೇಟಿಯಾಗಿದ್ದ ಪತ್ರಕರ್ತರರಿಗೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement