ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಉದ್ಯೋಗ ಖಾತ್ರಿ ಯೋಜನೆ ಅವ್ಯವಹಾರ ತನಿಖೆಗೆ ಆಗ್ರಹ

Mainashree
Updated On : 24 May 2014, 12:18 pm

ಬಂಗಾರಪೇಟೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬಂಗಾರಪೇಟೆ ತಾಲೂಕಿನ ಅನೇಕ ಗ್ರಾಮಪಂಚಾಯಿತಿಗಳಲ್ಲಿ ಬಾರೀ ಅವ್ಯವಹಾರಗಳು ನಡೆದಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಜೀತ ವಿಮುಕ್ತಿ ಸಂಘಟನೆ ತಾಲೂಕು ಸಂಚಾಲಕ ರಾಮಚಂದ್ರ ಒತ್ತಾಯಿಸಿದ್ದಾರೆ.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚೆಗೆ ಕೇಂದ್ರ ತಂಡ ತಾಲೂಕಿನ ಬೇತಮಂಗಲ ಮತ್ತು ಘಟ್ಟಮಾದಮಂಗಲ ಗ್ರಾಪಂಗಳಲ್ಲಿ ತನಿಖೆ ನಡೆಸಿವೆ. ಅದು ಕಾಟಾಚಾರದ ತನಿಖೆಯಾಗಿದ್ದು ಆ ಎರಡೂ ಗ್ರಾಪಂಗಳಲ್ಲಿ ನಡೆದಿರುವ ಅವ್ಯವಹಾರ ಬಯಲಿಗೆಳೆಯುವಲ್ಲಿ ಕೇಂದ್ರ ತಂಡ ವಿಫಲವಾಗಿದೆ ಎಂದು ಆರೋಪಿಸಿದರು.
ಜೆಸಿಬಿಗಳಲ್ಲಿ ಕೆಲಸ ಮಾಡಿರುವುದು, ಜಾಬ್ ಕಾರ್ಡ್‌ಗಳ ದುರ್ಬಳಕೆ, ಬ್ಯಾಂಕ್ ಖಾತೆಗಳಿಗೆ ಹಣ ಹಾಕಿ ಖಾತೆದಾರರಿಗೆ ಹಣ ಯಾವುದು ಎಂದು ತಿಳಿಸದೆ 100-200ಕೊಟ್ಟು ಅವರಿಂದ ಖಾತೆಯಲ್ಲಿದ್ದ ಹಣ ಪಡೆದಿರುವುದು, ಕಾಮಗಾರಿ ಬಿಲ್ಲುಗಳಲ್ಲಿ ನಕಲಿ ಸಹಿಗಳಿರುವುದು, ಆಡಳಿತಾತ್ಮಕ ಅನುದಾನ ಬಳಕೆಯಲ್ಲಿನ ಅವ್ಯವಹಾರಗಳು ಹೀಗೆ ಹತ್ತು ಹಲವು ಸಾಕ್ಷ್ಯಾದಾರಗಳಿದ್ದರೂ ಕೇಂದ್ರ ತಂಡ ಈ ಎರಡೂ ಗ್ರಾಮ ಪಂಚಾಯಿತಿಗಳಿಗೆ ಕ್ಲೀನ್ ಚೀಟ್ ನೀಡಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ ಎಂದು ದೂರಿದರು. ವೆಂಗಸಂದ್ರ, ಶ್ರೀನಿವಾಸಸಂದ್ರ, ಸುಂದರಪಾಳ್ಯ, ಎನ್. ಜಿ. ಹುಲ್ಕೂರ್, ತೊಪ್ಪನಹಳ್ಳಿ ಇನ್ನೂ ಮೊದಲಾದ ಗ್ರಾಪಂಗಳಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಒಕ್ಕೂಟದ ಅಧ್ಯಕ್ಷ ತಿಪ್ಪಣ್ಣ, ದಲಿತ ಮುಖಂಡ ಹುಣಸನಹಳ್ಳಿ ವೆಂಕಟೇಶ್, ಜಿ.ವಿ.ಕ ಸಂಘಟನೆಯ ಭಾರತಿ, ಚಿಟ್ಟೆಮ್ಮ, ಅರುಣ, ಶಕುಂತಲ ಮೊದಲಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement