ಕಳಪೆ ಬಿಸಿಯೂಟ: ಮಕ್ಕಳು, ಪೋಷಕರ ಪ್ರತಿಭಟನೆ
ಚಿಂತಾಮಣಿ: ಕತ್ತರಿಗುಪ್ಪೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಧ್ಯಾಹ್ನ ಬಿಸಿಯೂಟದಲ್ಲಿ ಜಿರಳೆ ಹಾಗೂ ಕೂದಲು, ಕೊಳೆತ ತರಕಾರಿ ಕಂಡು ಬಂದಿದ್ದರಿಂದ ಮಕ್ಕಳು ಹಾಗೂ ಪೋಷಕರು ಊಟವನ್ನು ತಿರಸ್ಕರಿಸಿ, ಗುಣಮಟ್ಟದ ಆಹಾರ ನೀಡುವಂತೆ ಪ್ರತಿಭಟಿಸಿದ ಘಟನೆ ನಡೆದಿದೆ.
ಸ್ಥಳೀಯ ಅಕ್ಷರ ದಾಸೋಹ ಅಧಿಕಾರಿ ರಾಮಕೃಷ್ಣಪ್ಪ ಹಾಗೂ ಮುಖ್ಯ ಶಿಕ್ಷಕ ಪಿಳ್ಳಪ್ಪ ಸೇರಿದಂತೆ ಅಡಿಗೆ ಸಹಾಯಕ ಸಿಬ್ಬಂದಿ ವಿರುದ್ಧ ಗ್ರಾಮದ ಪೋಷಕರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿ ತಿಳಿದ ಸ್ಥಳಕ್ಕೆ ತಾಲೂಕು ಅಕ್ಷರ ದಾಸೋಹ ಅಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಗ್ರಾಮದ ಹಿರಿಯರು ಅಧಿಕಾರಿಗಳಿಗೆ ಬುದ್ಧಿಮಾತು ಹೇಳಿ, ಸರ್ಕಾರಿ ಅನುದಾನ ದುರುಪಯೋಗವಾಗದಂತೆ ನೋಡಿಕೊಳ್ಳಿ. ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಿ ಎರ್ದು ತಾಕೀತು ಮಾಡಿದರು.
ಗ್ರಾಮಸ್ಥರಾದ ಹಾಲು ನಾರಾಯಣಸ್ವಾಮಿ, ಅಲ್ಲಾಭಕ್ಷ, ಜಹೀರ್, ಮುನಿಕೃಷ್ಣ, ಮುನಿರಾಜು, ಉಮಾಶಂಕರ್, ಶಿವಾರೆಡ್ಡಿ, ಬಾಲರಾಜು ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.