ಗಂಗಮ್ಮ ದೇವಿ ನೂತನ ವಿಗ್ರಹ ಪ್ರತಿಷ್ಟಾಪನೆ
ಗೌರಿಬಿದನೂರು: ಪಟ್ಟಣದ 23ನೇ ವಾರ್ಡ್ ಆನಂದಪುರದಲ್ಲಿ ಶ್ರೀ ಗಂಗಮ್ಮದೇವಿ ನೂತನ ವಿಗ್ರಹ ಪ್ರತಿಷ್ಠಾಪನೆ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಮುಂಜಾನೆ ಗೋಪೂಜೆ, ಅಭಿಷೇಕ, ಅರ್ಚನೆ, ಹೋಮಗಳು, ಪೂರ್ಣಾಹುತಿ, ಅಷ್ಟಾವದಾನ ಸೇವೆ, ಮತ್ತು ಮಹಾ ಮಂಗಳಾರತಿ ನಡೆಯಿತು. ಬಾಲಕೃಷ್ಣಭಟ್ ಮತ್ತು ಶಿಷ್ಯ ವೃಂದದವರಿಂದ ಪೂಜಾ ಕಾರ್ಯಕ್ರಮ ನಡೆಯಿತು. ಉಪಸಭಾಪತಿ ಎನ್.ಹೆಚ್.ಶಿವಶಂಕರರೆಡ್ಡಿ, ಪುರಸಭಾ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಆರ್.ಸತ್ಯನಾರಾಯಣ, ಎಂ.ಆರ್.ನರಸಯ್ಯ, ಕೆ.ಅಂಜಿನಪ್ಪ, ಪಾಲ್ಗೊಂಡಿದ್ದರು.