ತಂಬಾಕು ಸೇವನೆ ಹಾನಿ: ಜಾಗೃತಿಗೆ ಚಾಲನೆ
ಮಾಲೂರು: ತಂಬಾಕು ಸೇವನೆ, ಜೀವಕ್ಕೆ ಹಾನಿಯಾಗಿದ್ದರೂ ಅದರ ಬಗ್ಗೆ ಇಂದಿನ ಯುವಕರು ಅಡಿಕ್ಟ್ ಆಗುತ್ತಿರುವುದು ಖೇದಕರ ಎಂದು ಇನ್ಸ್‌ಪೆಕ್ಟ್‌ರ್ ಶಿವುಕುಮಾರ್ ಹೇಳಿದರು.
ಪಟ್ಟಣದ ಬಸ್‌ನಿಲ್ದಾಣದಲ್ಲಿ ಅವರು ತಂಬಾಕು ಸೇವನೆಯಿಂದ ಆಗುತ್ತಿರುವ ಹಾನಿಗಳ ಬಗ್ಗೆ ಜನರಲ್ಲಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವಕರು ಶೋಕಿಗಾಗಿ ತಂಬಾಕನ್ನು ಆಶ್ರಯಸುತ್ತಿದ್ದಾರೆ. ದೇಹವನ್ನೇ ನಂಗಿ ಹಾಕುವ ತಂಬಾಕನ್ನು ತಿನ್ನುವ ಅಥವಾ ಉಪಯೋಗಿಸುವುದನ್ನು ಬಿಡಬೇಕು ಎಂದರು.
ಎಸ್‌ಐ ದಯಾನಂದ್ ಮಾತನಾಡಿ, ತಂಬಾಕು ವಸ್ತುಗಳನ್ನು ಮಾರುವ ಪ್ರತಿ ಅಂಗಡಿಯವರು ಕಾನೂನಿನಂತೆ ತಂಬಾಕು ವಸ್ತುಗಳಿಂದ ದೇಹದ ಮೇಲೆ ಆಗುವ ಪರಿಣಾಮಗಳನ್ನು ತಿಳಿಸುವ ಬೋರ್ಡ್‌ಗಳನ್ನು ಆಳವಡಿಸಬೇಕು.ಇಲ್ಲದಿದ್ದಲಿ ಅಂಥ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.