ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೆಸ್ಕಾಂ ವಸತಿ ಗೃಹಕ್ಕೆ ಟೌನ್ ಪೊಲೀಸ್ ಠಾಣೆ ಶಿಫ್ಟ್

Mainashree
Updated On : 24 May 2014, 12:12 pm

ಕೋಲಾರ: ಬ್ರಿಟಿಷರ ಕಾಲದಲ್ಲಿ ನಿರ್ಮಿಸಿರುವ ಕೋಲಾರ ನಗರ ಪೊಲೀಸ್ ಠಾಣೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಲಿರುವ ಹಿನ್ನೆಲೆಯಲ್ಲಿ ಸಮೀಪದ ಬೆಸ್ಕಾಂ ವಸತಿ ಗೃಹಕ್ಕೆ ಠಾಣೆಯನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲು ಸಿದ್ಧತೆ ನಡೆದಿದೆ.
ಕ್ರಿ.ಶ. 1912ರಲ್ಲಿ ನಿರ್ಮಿಸಿರುವ ಟೌನ್ ಪೊಲೀಸ್ ಠಾಣೆ ಕಟ್ಟಡ, ಶಿಥಿಲವಾಗಿರುವುದರಿಂದ ಮಳೆಗಾಲದಲ್ಲಿ ಕೆಲಸ ನಿರ್ವಹಿಸಲು ಕಷ್ಟವಾಗುತ್ತಿರುವುದಲ್ಲದೆ, ಪ್ರಮುಖ ದಾಖಲೆಗಳನ್ನು ಸಂರಕ್ಷಿಸಲು ಆಗದಿರುವ ಹಿನ್ನೆಲೆಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಗೃಹ ಇಲಾಖೆ ಸಮ್ಮತಿಸಿ ಅನುದಾನ ಬಿಡುಗಡೆ ಮಾಡಿರುವುದರಿಂದ ಹೊಸ ಕಟ್ಟಡ ನಿರ್ಮಾಣವಾಗುವ ತನಕ ಬೆಸ್ಕಾಂ ವಸತಿ ಗೃಹವನ್ನು ದುರಸ್ತಿಗೊಳಿಸಿ ಕೆಲವು ತಿಂಗಳ ಕಾಲ ಅದರಲ್ಲಿ ಕೆಲಸ ಮಾಡುವುದಕ್ಕೆ ನಿರ್ಧರಿಸಲಾಗಿದೆ. ಹಳೆಯ ಕಟ್ಟಡಕ್ಕೆ ಬಳಸಿರುವ ಬೆಲೆಬಾಳುವ ಟೀಕ್ ಮರಗಳನ್ನು ಹಾಗೂ ಇತರೆ ಸಾಮಗ್ರಿಗಳನ್ನು ಕಾಪಾಡಿ ಹೊಸ ಕಟ್ಟಡಕ್ಕೆ ಬಳಕೆ ಮಾಡುವುದಕ್ಕೆ ಅಧಿಕಾರಿಗಳು ಉದ್ದೇಶಿಸಿದ್ದಾರೆ. ವಾಹನ ನಿಲುಗಡೆ, ರಿಕಾರ್ಡ್ ರೂಮ್, ಕಂಪ್ಯೂಟರ್ ವಿಭಾಗ, ಅಧಿಕಾರಿಗಳ ಕೊಠಡಿ ಸೇರಿದಂತೆ ಠಾಣೆಯ ಕಾರ್ಯನಿರ್ವಹಣೆಗೆ ಬೇಕಾದ ಎಲ್ಲಾ ಸಿದ್ಥತೆಗಳನ್ನು ಬೆಸ್ಕಾಂ ವಸತಿ ಗೃಹದಲ್ಲಿ ವ್ಯವಸ್ಥೆ ಮಾಡಲು ಇಲಾಖೆಯ ತಜ್ಞರಿಂದ ಸಲಹೆ ಪಡೆಯಲಾಗಿದೆ. ಅತಿ ಶೀಘ್ರವೇ ಠಾಣೆಯನ್ನು ಸ್ಥಳಾಂತರ ಮಾಡಿ ನಂತರ ಹಳೆ ಕಟ್ಟಡವನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement