ಸಕಾಲದ 26134 ಅರ್ಜಿ ವಿಲೇವಾರಿ
ಕೋಲಾರ: ಜಿಲ್ಲೆಯಲ್ಲಿ ಮೇ 1ರಿಂದ 23ರವರೆಗೆ ಸಕಾಲ ಯೋಜನೆಯಡಿಯಲ್ಲಿ 28970 ಅರ್ಜಿಗಳು ಸ್ವೀಕೃತವಾಗಿದ್ದು ಈ ಪೈಕಿ 26134 ವಿಲೇವಾರಿ ಆಗಿದೆ.
2012-13ನೇ ಸಾಲಿನಲ್ಲಿ ಕೋಲಾರ ತಾಲೂಕಿನ ದಿನ್ನೆಹೊಸಹಳ್ಳಿಯ ಕೆ.ಶಿಲ್ಪ ಎಂಬುವರು ನಾಡ ಕಚೇರಿಯಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಲು ವಿಳಂಬವಾದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅವರು ಅರ್ಜಿದಾರರಿಗೆ 500 ರು. ದಂಡ ಪಾವತಿಸಿದ್ದಾರೆ.
ಮೇ ತಿಂಗಳಲ್ಲಿ ಪ್ರಸ್ತುತ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 15580 ಅರ್ಜಿಗಳ ಪೈಕಿ 12530 ವಿಲೇವಾರಿ ಮಾಡಲಾಗಿದೆ, ಪ್ರಾದೇಶಿಕ ಸಾರಿಗೆ ಇಲಾಖೆಯ 2896 ಅರ್ಜಿಗಳಲ್ಲಿ ಈ ಹಿಂದಿನ ಸಾಲಿನ ಬಾಕಿ ಅರ್ಜಿಗಳು ಸೇರಿದಂತೆ 3320 ವಿಲೇವಾರಿ ಆಗಿದೆ.
ಸಬ್‌ರಿಜಿಸ್ಟ್ರಾರ್ ಕಚೇರಿಗೆ ಸಂಬಂಧಿಸಿದ 2560ರಲ್ಲಿ 2587, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 1863ರಲ್ಲಿ 1852, ಪುರಸಭೆಗಳ 1046ರಲ್ಲಿ 1058 ಅರ್ಜಿಗಳನ್ನು ಇತ್ಯರ್ಥ ಮಾಡಲಾಗಿದೆ.
ಇನ್ನುಳಿದಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ 20 ಅರ್ಜಿಗಳು ಸ್ವೀಕೃತವಾಗಿದ್ದು ಹಿಂದಿನ ಅರ್ಜಿಗಳು ಸೇರಿ 181 ವಿಲೇವಾರಿ ಆಗಿದೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ 689ಕ್ಕೆ 692, ಆಹಾರ ಇಲಾಖೆಯಲ್ಲಿ 100ಕ್ಕೆ 100, ಆರೋಗ್ಯ ಇಲಾಖೆಯಲ್ಲಿ 374ಕ್ಕೆ 373, ಗೃಹ ಇಲಾಖೆಯಲ್ಲಿ 1411ಕ್ಕೆ 1227, ರೇಷ್ಮೆ ಇಲಾಖೆಯಲ್ಲಿ 371ರಲ್ಲಿ 362, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 255ರಲ್ಲಿ 207, ಕಾರ್ಮಿಕ ಇಲಾಖೆಯಲ್ಲಿ 131ಕ್ಕೆ 130, ಸಹಕಾರ ಇಲಾಖೆಯಲ್ಲಿ 24ಕ್ಕೆ 16, ಸರ್ವೆ ಇಲಾಖೆಯಲ್ಲಿ 881ರಲ್ಲಿ 807, ನಗರಸಭೆಗಳ 695ರಲ್ಲಿ 661 ಅರ್ಜಿಗಳು ಇತ್ಯರ್ಥವಾಗಿದೆ. ಗ್ರಂಥಾಲಯದಲ್ಲಿ 53 ಅರ್ಜಿಗಳಲ್ಲಿ 76, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 6 ಅರ್ಜಿಗಳ ಸ್ವೀಕೃತಿ, 8 ಅರ್ಜಿಗಳ ಇತ್ಯರ್ಥವಾಗಿದೆ ಎಂದು ಜಿಲ್ಲಾ ಸಕಾಲ ಮಿಷನ್ ಐಟಿ ಸಲಹೆಗಾರ ವೆಂಕಟೇಶ್ ತಿಳಿಸಿದ್ದಾರೆ.