ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಿಲ್ಲಾಸ್ಪತ್ರೆ ಅಧೀಕ್ಷಕ ಅಮಾನತು

Mainashree
Updated On : 24 May 2014, 11:35 am

ಕ.ಪ್ರ. ವಾರ್ತೆ, ಕೋಲಾರ, ಮೇ 24
ಅದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದಡಿ ಶ್ರೀ ನರಸಿಂಹರಾಜ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಮುನಿರಾಜು ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಎಸ್.ಎನ್. ಜಯರಾಂ ಆದೇಶ ಹೊರಡಿಸಿದ್ದಾರೆ.
ಕೋಲಾರ ಜಿಲ್ಲಾಸ್ಪತ್ರೆಯ ಅಧೀಕ್ಷಕ ಮುನಿರಾಜು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ್ದಾರೆಂಬ ಮಾಹಿತಿ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರು ಕಳೆದ ಏಪ್ರಿಲ್ ತಿಂಗಳ 25 ರಂದು ಮುನಿರಾಜು ಮನೆಯ ಮೇಲೆ ದಾಳಿ ಮಾಡಿದ್ದರು.
ಈ ಸಂದರ್ಭದಲ್ಲಿ 3.10 ಲಕ್ಷ ನಗದು, 8.62 ಲಕ್ಷ ಮೌಲ್ಯದ ಚಿನ್ನಾಭರಣ, ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಎಸ್.ಎನ್.ಆರ್. ಆಸ್ಪತ್ರೆಯ ಆಧೀಕ್ಷಕ ಮುನಿರಾಜು 1988ರ ಆಗಸ್ಟ್ 8 ರಲ್ಲಿ ಆರೋಗ್ಯ ಇಲಾಖೆಗೆ ಸೇರಿಕೊಂಡಿದ್ದು ಗುಮಾಸ್ತರಾಗಿ ಹಾಗೂ ಹಂತ ಹಂತವಾಗಿ ದೊರೆತ ಬಡ್ತಿಯ ನಂತರ ಆಧೀಕ್ಷಕರಾಗಿದ್ದರು.
ಮುನಿರಾಜು ಮಾಸಿಕ 20 ಸಾವಿರದಿಂದ 36 ಸಾವಿರದವರೆಗೆ ಸಂಬಳ ಪಡೆಯುತ್ತಿದ್ದು ಆದಾಯಕ್ಕಿಂತ ಹೆಚ್ಚಿನ ವರಮಾನ ಹೊಂದಿದ್ದಾರೆಂಬ ಮಾಹಿತಿಯ ಆಧಾರದ ಮೇಲೆ ಕೋಲಾರ ಲೋಕಾಯುಕ್ತ ಪೊಲೀಸರು ಮುನಿರಾಜು ಅವರ ಆದಾಯದ ಮೂಲಗಳನ್ನು ಪತ್ತೆ ಮಾಡಿದ ಬಳಿಕ ನಗರದ ಕನಕನಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಮುನಿರಾಜು ಮನೆ ಮೇಲೆ ದಾಳಿ ಮಾಡಿದ್ದರು.
ಕನಕನಪಾಳ್ಯದಲ್ಲಿ ನಿರ್ಮಿಸಿರುವ ಲಕ್ಷಾಂತರ ರು. ಮೌಲ್ಯದ ಭವ್ಯ ವಸತಿಗೃಹಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಹ ಲೋಕಾಯುಕ್ತರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಪೂರ್ಣಗೊಳಿಸಿದ ಬಳಿಕ ಮುನಿರಾಜು ಅವರ ಸೇವಾವಧಿಯ ಒಟ್ಟು ಆದಾಯ 12.90,240 ಗಳಾಗಿದ್ದು 21,34,000 ಅಕ್ರಮ ಆಸ್ತಿ ಗಳಿಸಿದ್ದಾರೆ. ಒಟ್ಟು 76,92,093 ಆಸ್ತಿ ಹೊಂದಿ ಶೇ.320.93ರಷ್ಟು ಅಕ್ರಮ ಆಸ್ತಿ ಸಂಪಾದಿಸಿದ್ದಾರೆಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ಹಿನ್ನಲೆಯಲ್ಲಿ ಶನಿವಾರ ಆರೋಗ್ಯ ಇಲಾಖೆಯ ಆಯುಕ್ತರಾದ ಎಸ್.ಎನ್. ಜಯರಾಂ ಅವರು ಮುನಿರಾಜು ಅವರನ್ನು ಅಮಾನತುಗೊಳಿಸಿದ್ದಾರೆ.
ಕೋಲಾರ ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾ ಧಿಕಾರಿಯಾಗಿ ಇತ್ತೀಚೆಗಷ್ಟೇ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಸಿ. ಮೋಹನ್‌ದಾಸ್ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಡಿವೈಎಸ್ಪಿ ರಾಮಮೂರ್ತಿ, ಇನ್ಸ್‌ಪೆಕ್ಟರ್‌ಗಳಾದ ಅಶ್ವತ್ಥ್ ನಾರಾಯಣ, ಮುನಿಕೃಷ್ಣ, ಸಿಬ್ಬಂದಿಗಳಾದ ಕೃಷ್ಣಾರೆಡ್ಡಿ, ನರಸಿಂಹ, ರಾಮಚಂದ್ರ, ಸುನೀಲ್, ಮಂಜುಳಾ, ರವಿಕುಮಾರ್, ನಿರ್ಮಲ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement