101 ತೆಂಗಿನಕಾಯಿ ಒಡೆದರು
ಬಂಗಾರಪೇಟೆ: ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ನೂರೊಂದು ತೆಂಗಿನ ಕಾಯಿ ಒಡೆದು ಬಾರಿ ಪಟಾಕಿ ಸಿಡಿಸಿ ಸಂಭ್ರಮಪಟ್ಟರು.
ಪುರಸಭೆ ಬಸ್ ನಿಲ್ದಾಣದಿಂದ ಮೋದಿ ಕಟೌಟ್ ಅನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಕೋದಂಡರಾಮಸ್ವಾಮಿ ದೇವಾಲಯ ಬಳಿ ಬಂದು ನೂರೊಂದು ತೆಂಗಿನಕಾಯಿ ಒಡೆದರು.
ನಂತರ ಕುವೆಂಪು ವೃತ್ತದಲ್ಲಿ ಜಮಾಯಿಸಿ ಮೋದಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನೆರೆದಿದ್ದ ಸಾರ್ವಜನಿಕರಿಗೆ ಸಿಹಿ ಹಂಚಿ ಸಂತಸಪಟ್ಟರು. ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪ ಮಾತನಾಡಿದರು. ಕಣಿಂಬೆಲೆಯಲ್ಲಿ: ಮೋದಿ ಪ್ರಧಾನಿಯಾಗಿರುವುದಕ್ಕೆ ತಾಲೂಕಿನ ಕಣಿಂಬೆಲೆ ಗ್ರಾಮದಲ್ಲಿ ಯುವ ಕಾರ್ಯಕರ್ತರು ಅನ್ನದಾನ ಮಾಡಿ ಸಂಭ್ರಮಪಟ್ಟರು.ಇದರ ನೇತೃತ್ವವನ್ನು ಚಿನ್ನಪ್ಪ ವಹಿಸಿದ್ದರು.
ಈ ವೇಳೆ ಪುರಸಭೆ ಸದಸ್ಯರಾದ ಬಿ.ಸಿ. ಶ್ರೀನಿವಾಸಮೂರ್ತಿ, ವೇದಾಪತಿ ಪ್ರಭಾಕರ್, ಪಕ್ಷದ ತಾಲೂಕು ಅಧ್ಯಕ್ಷ ಮಾರ್ಕಂಡೇಗೌಡ, ನಗದ ಅಧ್ಯಕ್ಷ ರಮೇಶ್, ಎಪಿಎಂಸಿ ಅಧ್ಯಕ್ಷ ಮಹೇಶ್, ಚಕ್ರವರ್ತಿ, ಬಿ.ನಾರಾಯಣಸ್ವಾಮಿ, ಕುಟ್ಟಿ, ಬಜರಂಗದಳ ಮಹೇಶ್, ಶಾಂತಿನಗರ ಮಂಜುನಾಥ್, ನಾಗಪ್ರಕಾಶ್ ಮತ್ತಿತರರು ಇದ್ದರು.