ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಧಿಕಾರಶಾಹಿಗಳ ವಿರುದ್ಧ ಜನಪ್ರತಿನಿಧಿಗಳು ಗರಂ!

Mainashree
Updated On : 27 May 2014, 12:23 pm

ಕೋಲಾರ: ಜಿಲ್ಲಾ ಪಂಚಾಯಿತಿಯಲ್ಲಿ ಜನಪ್ರತಿನಿಧಿಗಳಿಗೆ ಇರುವ ಅಧಿಕಾರದ ಬಗ್ಗೆ ಪಂಚಾಯಿತ್ ರಾಜ್ ಕಾಯಿದೆಯಲ್ಲಿ ಉಲ್ಲೇಖವಾಗಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆಂದು ಜಿಪಂ ಅಧ್ಯಕ್ಷ ಮತ್ತು ಬಹುತೇಕ ಸದಸ್ಯರು ಆರೋಪಿಸಿದರು.
ಜಿಪಂ ಸಾಮಾನ್ಯ ಸಭೆಯಲ್ಲಿ ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಅಧಿಕಾರಿಗಳ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಅಚ್ಚರಿ ಮೂಡಿಸಿದರು. ತಾವು ಅಧ್ಯಕ್ಷರಾಗಿ 9 ತಿಂಗಳಾಗಿದೆ, ಇದು ನನ್ನ ಕಡೆಯ ಸಭೆ. ಅಧಿಕಾರಿಗಳು ಸರ್ಕಾರದ ಯಾವುದೇ ಕಡತಗಳನ್ನು ತಮಗೆ ತೋರಿಸದೆ, ಸಲಹೆ ಪಡೆಯದೆ ತಮ್ಮಗಿಷ್ಟ ಬಂದಂತೆ ಕೆಲಸ ಮಾಡುತ್ತಿದ್ದಾರೆ. ಪಂಚಾಯಿತ್ ರಾಜ್ ಕಾಯಿದೆಯಲ್ಲಿ ಜಿಪಂ ಅಧ್ಯಕ್ಷರ ಅಧಿಕಾರ ಬಗ್ಗೆ ಉಲ್ಲೇಖಿಸಲಾಗಿದೆ. ಆದರೂ ಅಧಿಕಾರಿಗಳು ನಿಯಮಾನುಸಾರ ಕೆಲಸ ಮಾಡುತ್ತಿಲ್ಲ. ಜಿಪಂ ಆಡಳಿತಕ್ಕೂ ಅಧ್ಯಕ್ಷರಿಗೂ ಸಂಬಂಧವಿಲ್ಲವೆಂಬ ಧೋರಣೆ ಸರಿಯಲ್ಲವೆಂದು ಅಧಿಕಾರಿಗಳ ವಿರುದ್ಧ ಗರ್ಜಿಸಿದರು. ಇದರಿಂದ ಕುಪಿತರಾದ ಕಾಂಗ್ರೆಸ್ ಸದಸ್ಯ ಹರೀಶ್, ಅಧಿಕಾರದಿಂದ ನಿರ್ಗಮಿಸುತ್ತಿರುವ ಸಂದರ್ಭದಲ್ಲಿ ಸರ್ಕಾರದ ಮೇಲೆ ಆರೋಪಿಸುವುದು ಎಷ್ಟು ಸರಿ? ಎಂದರು. ನಿಯಮಾವಳಿಗಳ ಪ್ರಕಾರ ಏಕೆ ಕೆಲಸ ನಡೆಯುತ್ತಿಲ್ಲವೆಂದು ಸದಸ್ಯರು ಉತ್ತರ ಬಯಸಿದರಾದರೂ ಸಿಇಒ ತುಟಿ ಬಿಚ್ಚಲಿಲ್ಲ. ಸದಸ್ಯರ ಪ್ರಶ್ನೆಗಳಿಗೆ ನೇರ ಉತ್ತರ ನೀಡುವ ಬದಲು ಅಧ್ಯಕ್ಷರ ಬಳಿ ತಮ್ಮ ನಿಲುವು ತಿಳಿಸಿದಾಗ, ಸದಸ್ಯರು ಅಕ್ಷೇಪ ವ್ಯಕ್ತಪಡಿಸಿದರಾದರೂ ಯಾವುದೇ ಪ್ರತಿಕ್ರಿಯೆ ಸಿಇಒ ಕಡೆಯಿಂದ ಬರಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement