ಎಲ್ಲೆ ಮೀರಿದ ಸಂತೋಷ
ಮಾಲೂರು: ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದ ಹಾಗೆ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮವನ್ನು ಆಚರಿಸಿದರು.
ಪಟ್ಟಣದ ಮಾರಿಕಾಂಬ ಮಹಾದ್ವಾರ ವೃತ್ತದ ಬಳಿ ಪಟಾಕಿ ಸಿಡಿಸಿದ ಕಾರ್ಯಕರ್ತರು ಸಾರ್ವಜನಿಕರು ಸಿಹಿ ಹಂಚಿ ಸಂಭ್ರಮಿಸಿದರು.
ಯುವ ಮೋರ್ಚಾ ಕಾರ್ಯಕರ್ತರು ಬೆಳಗ್ಗಿನಿಂದ ಸಂಜೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯುವವರೆಗೆ ಉಚಿತವಾಗಿ ಚಹಾ ವಿತರಿಸಿದರು. ಪಟ್ಟಣದ ಪ್ರತಿ ವೃತ್ತದ ಬಳಿ ಮೋದಿ ಅಭಿಮಾನಿಗಳು ಪಟಾಕಿ ಸಿಡಿಸಿದರು. ತಾಲೂಕು ಗಾಣಿಗ ಸಮುದಾಯದವರು ನರೇಂದ್ರ ಮೋದಿ ಪ್ರಧಾನಿಯಾದ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀ ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಮೋದಿಗೆ ಜೈಕಾರ ಹಾಕಿದರು.