ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಾಡಿಗೆ ಕೇಳಿದ್ದಕ್ಕೆ ಥಳಿತ

Mainashree
Updated On : 27 May 2014, 12:24 pm

ಕೋಲಾರ: ಅಂಗಡಿ ಬಾಡಿಗೆ ಕೇಳಿದ ಸರ್ಕಾರಿ ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಮೇಲೆ ಹಲ್ಲೆ ರಮಣ ಎಂಬುವರು ಹಲ್ಲೆ ನಡೆಸಿರುವ ಘಟನೆ ಸೋಮವಾರ ನಡೆದಿದ್ದು ಈ ಸಂಬಂಧ ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಹಲ್ಲೆಗೆ ಒಳಗಾಗಿದ್ದ ಸಂಘದ ಅಧ್ಯಕ್ಷ ಎಂ. ಮಾರುತಿ ಕುಮಾರ್ ಗಾಯಗೊಂಡಿದ್ದು ನಗರದ ಎಸ್.ಎನ್.ಆರ್ . ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಿಲ್ಲಾ ಸರ್ಕಾರ ವಾಹನ ಚಾಲಕರ ಸಂಘದ ಕಚೇರಿಯು ಇಲ್ಲಿನ ನ್ಯಾಯಾಲಯದ ವೃತ್ತದಲ್ಲಿದ್ದು ಇದಕ್ಕೆ ಹೊಂದಿಕೊಂಡಿರುವ ಕಟ್ಟಡದ 2 ಕೊಠಡಿಗಳನ್ನು ಬಾಡಿಗೆಗೆ ಪಡೆದಿರುವ ರಮಣ ಎರಡು ವರ್ಷಗಳಿಂದ ಬಾಡಿಗೆ ನೀಡಿರಲಿಲ್ಲವೆನ್ನಲಾಗಿದೆ. ಅಂಗಡಿ ಬಾಡಿಗೆ ಕೇಳಿದ್ದರಿಂದ ಕುಪಿತರಾದ ಆರೋಪಿ ಅವಾಚ್ಯ ಪದಗಳಿಂದ ನಿಂದಿಸಿ, ತನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ನಾಗರಾಜ್ ಜೊತೆಯಲ್ಲಿದ್ದರೆಂದು ಗಾಯಾಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement