ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಅಂಬೇಡ್ಕರ್ ತತ್ವಾದರ್ಶ ಅಳವಡಿಸಿಕೊಳ್ಳಿ'

Mainashree
Updated On : 28 May 2014, 12:02 pm

ಟೇಕಲ್: ಇಂದಿನ ಯುವಪೀಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶ, ತತ್ವ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಬಂಗಾರಪೇಟೆ ಕನ್ನಡಸಂಘದ ಅಧ್ಯಕ್ಷ ಪಲ್ಲವಿಮಣಿ ಹೇಳಿದರು.
ಟೇಕಲ್‌ನ ಕೆ.ಜಿ.ಹಳ್ಳಿಯಲ್ಲಿ ಕರ್ನಾಟಕ ದಲಿತ ಸಮಾಜ ಸೇನೆ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 123ನೇ ಜನ್ಮದಿನ ಹಾಗೂ ದಲಿತ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಕೆಪಿಸಿಸಿ ಕಾರ್ಯದರ್ಶಿ ಹಾಗೂ ಮಾಜಿ ಜಿ.ಪಂ. ಸದಸ್ಯ ಆರ್.ರಾಜಣ್ಣ ಕಾರ್ಯಕ್ರಮ ಉದ್ಘಾಟಿಸಿದರು.ಸೂಲಿಕುಂಟೆ ಆನಂದ್, ಶಿಕ್ಷಕ ಎ.ಕೆ.ವೆಂಕಟೇಶ್, ಅಶೋಕ್‌ಕುಮಾರ್, ಬಿ.ಕೆ.ನಾರಾಯಣಸ್ವಾಮಿ ಮಾತನಾಡಿದರು. ಸಭೆಯಲ್ಲಿ ಮಂಜುನಾಥ್, ಉಳ್ಳೇರಹಳ್ಳಿ ನಾಗರಾಜ್, ತಂಬಹಳ್ಳಿ ಗೋಪಿನಾಥ್, ಯಲುವಗುಳಿ ನಾಗರಾಜ್, ಮಂಜುನಾಥ್, ವೆಂಕಟೇಶ್, ಮಾಕಾರಹಳ್ಳಿ ಮಂಜುನಾಥ್, ಶಶಿಧರ್, ಅವಿನಾಶ್, ವೀರಕಪುತ್ರದ ನಾಗರಾಜ್, ದೊಡ್ಡಪ್ಪಯ್ಯ, ಎ.ಎಸ್.ಐ. ರಷೀದ್ ಖಾನ್, ಚಲಪತಿ ಮುಂತಾದವರು ಉಪಸ್ಥಿತರಿದ್ದರು. ಕೆ.ಜಿ.ಹಳ್ಳಿ ರಾಜಬೀದಿಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಮೆರವಣಿಗೆ ಮಾಡಿ ನಮನ ಸಲ್ಲಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement