ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಆಡಂಬರ ಮದುವೆಗಳಿಗೆ ಕಡಿವಾಣ ಹಾಕಿ'

Mainashree
Updated On : 28 May 2014, 12:15 pm

ಚಿಂತಾಮಣಿ: ಆಡಂಬರ ಮದುವೆಗಳಿಗೆ ಕಡಿವಾಣ ಹಾಕಿ ಸರಳ ವಿವಾಹಗಳಿಗೆ ಪ್ರೋತ್ಸಾಹಿಸಿ ಎಂದು ಕೈವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ಮೊಹಮ್ಮದ್ ಖಾಸೀಮ್ ಹೇಳಿದರು.  
ನಗರದ ಎಂ.ಜಿ.ರಸ್ತೆಯಲ್ಲಿರುವ ಶ್ರೀ ಶಿವಸೂರ್ಯ ಕಲ್ಯಾಣ ಮಂಟಪದ ಆವರಣದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಉಚಿತ ರಕ್ತದಾನ ಸಂಸ್ಥೆ ಹಾಗೂ ಬಾಬಾಸಾಹೇಬ್ ಯುವ ವೇದಿಕೆ 123ನೇ ಅಂಬೇಡ್ಕರ್ ಜನ್ಮ ದಿನಾಚರಣೆ ಅಂಗವಾಗಿ, ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಿಪಿಐ ನಂಜಪ್ಪ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಡಾ. ಬಿ.ಆರ್.ಅಂಬೇಡ್ಕರ್ ಉಚಿತ ರಕ್ತದಾನ ಸಂಸ್ಥೆಯ ಅಧ್ಯಕ್ಷ ಬೀಡಾ ಶ್ರೀನಿವಾಸ್, ಡಾ.ಎಂ.ಜೆಡ್.ಖಾನ್, ವಕೀಲ ಇಬ್ರಾಹಿಂ, ವಿ.ಎನ್.ಎಸ್. ವೆಂಕಟರವಣಸ್ವಾಮಿ, ನಗರಸಭೆ ಪೌರಾಯುಕ್ತ ಚನ್ನೇಗೌಡ, ರಾಜ್ಯ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷ ಅರ್.ವೆಂಕಟರಮಣಾರೆಡ್ಡಿ, ಶಿವಸೂರ್ಯ ಕಲ್ಯಾಣ ಮಂಟಪದ ಮಾಲೀಕ ವೆಂಕಟೇಶಪ್ಪ, ದಲಿತ ಸಂಘರ್ಷ ಸಮಿತಿ ಸಂಚಾಲಕ ಜಿ.ನಾರಾಯಣಸ್ವಾಮಿ, ಪ್ರೌಢಶಾಲೆಯ ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್.ಮಂಜುನಾಥ್, ನಗರಸಭಾ ಸದಸ್ಯರಾದ ಅಬ್ಬುಗುಂಡು ಶ್ರೀನಿವಾಸರೆಡ್ಡಿ ಸೇರಿದಂತೆ ಸಂಘ ಸಂಸ್ಥೆಯ ಮುಖಂಡರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement