'ನರೇಂದ್ರ ಮೋದಿ ಅಲೆಯಿಂದಾಗಿ ಜೆಡಿಎಸ್‌ಗೆ ಸೋಲು'
ಮಾಲೂರು: ಮೋದಿ ಅಲೆಯಿಂದಾಗಿ ನಮ್ಮ ಅಭ್ಯರ್ಥಿ ಸೋಲಬೇಕಾಯಿತು ಎಂದು ಶಾಸಕ ಮಂಜುನಾಥ್ ಗೌಡ ಹೇಳಿದರು.
ಅವರು ಪತ್ರಿಕಾ ಭವನದಲ್ಲಿ ಪತ್ರಕರ್ತರೂಡನೆ ಮಾತನಾಡಿ, ಜಿಲ್ಲೆಯೆಲ್ಲಡೆ ಜೆಡಿಎಸ್ ಅಭ್ಯರ್ಥಿ ಪರ ಗಾಳಿ ಬೀಸುತ್ತಿತ್ತು. ಉತ್ತಮ ರೀತಿಯಲ್ಲಿ ಚುನಾವಣೆ ಎದುರಿಸಿದ್ದೀವಿ. ಮುನಿಯಪ್ಪ ಅವರಿಗೆ ಜೆಡಿಎಸ್ ಅಭ್ಯರ್ಥಿ ಕೇಶವ್ ಪ್ರಬಲ ಎದುರಾಳಿಯಾಗಿದ್ದರು. ಆದರೆ ಮೋದಿ ಅಲೆ ನಮ್ಮ ಲೆಕ್ಕಾಚಾರವನ್ನು ತಲೆಕೆಳಗು ಮಾಡಿತು ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕರ ಚುನಾವಣೆಯಲ್ಲಿ ತಾಲೂಕಿನ ಮತದಾರರು ಮತ್ತೆ ಜೆಡಿಎಸ್ ನ ಬೆಂಬಲಿಸಿರುವ ಕಾರಣ ನಮ್ಮ ಅಭ್ಯರ್ಥಿ ಕೆ.ವೈ.ನಂಜೇಗೌಡ ಜಿಲ್ಲೆಯಲ್ಲೇ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆದಿದ್ದಾರೆ. ಈ ಚುನಾವಣೆಯ ಫಲಿತಾಂಶ ಉತ್ತೇಜನಕಾರಿ. ಮುಂದೆ ತಾಲೂಕಿನಲ್ಲಿ ಯಾವುದೇ ಹಂತದ ಚುನಾವಣೆ ಬಂದರೂ ಜೆಡಿಎಸ್ ಅತಿ ಗಂಭೀರವಾಗಿ ತೆಗೆದುಕೊಂಡು ವಿಜಯ ಸಾಧಿಸುವುದಾಗಿ ತಿಳಿಸಿದರು. ಕೋಚಿಮುಲ್‌ನ ನೂತನ ನಿರ್ದೇಶಕ ಕೆ.ವೈ.ನಂಜೇಗೌಡ, ಪುರಸಭೆ ಸದಸ್ಯ ಜಾಕೀರ್ ಖಾನ್,ಅಲೂಮಂಜು, ಮುಖಂಡ ಪ್ರದೀಪ್ ರೆಡ್ಡಿ, ಲಕ್ಕೂರು ಸುರೇಶ್ ಇದ್ದರು.