ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನೀರಿನ ಲಭ್ಯತೆಗೆ ಅನುಗುಣವಾಗಿ ತೋಟಗಾರಿಕೆ ಬೆಳೆ ಬೆಳೆಯಿರಿ

Mainashree
Updated On : 28 May 2014, 12:14 pm

ಕೋಲಾರ: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಪಂಗಡದ ರೈತರಿದ್ದಾರೆ. ತಮಗಿರುವ ಜಮೀನಿನಲ್ಲಿ ನೀರಿನ ಅವಶ್ಯಕತೆಗೆ ಅನುಗುಣವಾಗಿ ತೋಟಗಾರಿಕೆ ಬೆಳೆಗಳು ಬೆಳೆಯುವುದರ ಜೊತೆಗೆ, ಆರ್ಥಿಕವಾಗಿ ಸಬಲ ರಾಗಬೇಕು ಎಂದು ಜಿಲ್ಲಾಧಿಕಾರಿ ಡಿ.ಕೆ.ರವಿ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಪರಿಶಿಷ್ಟ ಜಾತಿ ಪಂಗಡದ ರೈತರಿಗೆ ಬೆಂಗಳೂರಿನ ನ್ಯಾಷನಲ್ ಹಾರ್ಟಿಕಲ್ಚರ್ ಬೋರ್ಟ್ ವತಿಯಿಂದ ಹಮ್ಮಿಕೊಂಡಿದ್ದ ಉತ್ತೇಜನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ರೈತರಿಗೆ ಪ್ರೋತ್ಸಾಹವಾಗಿ ಸಬ್ಸಿಡಿ ರೂಪದಲ್ಲಿ ರಾಷ್ಟ್ರಿಯ ತೋಟಗಾರಿಕಾ ಮಂಡಳಿ ಹಾಗೂ ರಾಜ್ಯ ತೋಟಗಾರಿಕೆ ಇಲಾಖೆಯವರು ಶೇ.40 ಹಾಗೂ ಶೇ.50ರಷ್ಟು ಸಹಾಯಧನ ನೀಡಲಿದ್ದಾರೆ. ದಲಿತ ರೈತರು ಇದನ್ನು ಉಪಯೋಗಿಸಿಕೊಳ್ಳಬೇಕು ಎಂದರು.
ಕೋಲಾರ ಜಿಲ್ಲೆಯಲ್ಲಿ ನೀರಿಗೆ ಬರ. ಬತ್ತ, ಕಬ್ಬು ಇತ್ಯಾದಿಗಳನ್ನು ಬೆಳೆಯುವ ಬದಲು ಮಾವು, ಬಾಳೆ, ಪಪ್ಪಾಯ, ಬೆಳೆಗಳನ್ನು ಬೆಳೆಯಬೇಕು, ಪಾಲಿ ಹೌಸ್‌ಗಳಲ್ಲಿ ತೋಟಗಾರಿಕಾ ಉತ್ಪನ್ನಗಳನ್ನು ಬೆಳೆದರೆ ಉತ್ತಮ ಇಳುವರಿಯ ಜೊತೆಗೆ ಆದಾಯ ಹೆಚ್ಚಾಗುತ್ತದೆ ಎಂದರು. ಕೋಲಾರ ಜಿಲ್ಲೆ ಖಾಸಗಿ ಶಿಕ್ಷಣ ಸಂಸ್ಥೆಗಳ ಜಿಲ್ಲಾಧ್ಯಕ್ಷ ಎಸ್.ಮುನಿಯಪ್ಪ, ತೋಟಗಾರಿಕೆ ಕಾಲೇಜಿನ ಉಪನ್ಯಾಸಕ ಪ್ರೊ.ಶಿವಣ್ಣ, ಪ್ರೊ. ಆಂಜನೇಯರೆಡ್ಡಿ, ಪ್ರೊ. ಸೀತಾರಾಮ್ ಮಾತನಾಡಿದರು.
ವಿಜಯಕುಮಾರ್, ಸಿ.ಪಿ.ಎಂ.ನಾರಾಯಣಸ್ವಾಮಿ, ಬೆಳಮಾರನಹಳ್ಳಿ ಆನಂದ್, ರಾಜಪ್ಪ ಜಿಲ್ಲಾ ಮತ್ತು ತಾಲೂಕು ಮಟ್ಟದ ತೋಟಗಾರಿಕಾ ಅಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಇನ್ನಷ್ಟು ಮಾರ್ಗದರ್ಶನ ನೀಡಬೇಕೆಂದು ತಿಳಿಸಿದರು.
ಅಧ್ಯಕ್ಷತೆಯನ್ನು ತೋಟಗಾರಿಕಾ ಮಂಡಳಿಯ ಉಪನಿರ್ದೇಶಕ ದಾಲ್ ಸಿಂಗ್ ವಹಿಸಿದ್ದರು. ಕೋಲಾರ ಹಾಗೂ ಇತರೆ ತಾಲೂಕುಗಳಿಂದ ಅನೇಕ ಪ್ರಗತಿಪರ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement