ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬ್ರಾಹ್ಮಣ, ವೈಶ್ಯ ಜನಾಂಗಕ್ಕೆ ಮೀಸಲಾತಿ ನೀಡಲು ಆಗ್ರಹ

Srinivasa Murthy VN
Updated On : 2 Aug 2013, 12:13 pm

ಮೈಸೂರು: ಬ್ರಾಹ್ಮಣ ಮತ್ತು ವೈಶ್ಯ ಜನಾಂಗಕ್ಕೆ ಶೈಕ್ಷಣಿಕ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಒದಗಿಸಬೇಕು ಎಂದು ವಿಪ್ರ ಪರಸ್ಪರ ಸಹಾಯ ಸಮಿತಿ ಅಧ್ಯಕ್ಷ ಹಾಗೂ ಕೆಜೆಪಿ ಮುಖಂಡ ಎಚ್.ವಿ. ರಾಜೀವ ಆಗ್ರಹಿಸಿದರು.ಸಚಿವರಾದ ಆಂಜನೇಯ, ಆರ್.ವಿ. ದೇಶಪಾಂಡೆ, ದಿನೇಶ್ ಗುಂಡೂರಾವ್, ಶಾಸಕ ವೈ.ಎಸ್.ವಿ. ದತ್ತ ಅವರು ಬ್ರಾಹ್ಮಣ ಮತ್ತು ವೈಶ್ಯ ಜನಾಂಗಕ್ಕೆ ಮೀಸಲಾತಿ ಕೊಡಲು ಒಲವು ತೋರಿಸಿರುವುದು ಸ್ವಾಗತಾರ್ಹ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಎಲ್ಲ ಜನಾಂಗದಲ್ಲಿ ಇರುವಂತೆ ವಿಪ್ರರಲ್ಲೂ ಬಡವರು ಇದ್ದಾರೆ. ಗುಲ್ಬರ್ಗ, ರಾಯಚೂರು, ಬೆಳಗಾವಿ, ಬೀದರ್, ಕಾರವಾರ, ಮೈಸೂರು ಸುತ್ತಮುತ್ತ ಬಡ ಬ್ರಾಹ್ಮಣರು ಇದ್ದಾರೆ. ವಿಪ್ರರಿಗೆ ಶೈಕ್ಷಣಿಕ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಕನಿಷ್ಠ ಮೀಸಲಾತಿ ಅಗತ್ಯವಿದೆ. ಹೀಗಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಕೊಡುವ ಸರ್ಕಾರಿ ಸೌಲಭ್ಯಗಳನ್ನು ವಿಪ್ರ ಸಮುದಯಕ್ಕೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು. ಸಮಿತಿಯ ಪದಾಧಿಕಾರಿಗಳಾದ ಸುಂದರೇಶ್, ಕಣ್ಣನ್, ಪ್ರಶಾಂತ್ ತಾತಾಚಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement