ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ದೊಡ್ಡಹರವೆಯಲ್ಲಿ ಹಾಲು ವಿತರಣೆ

Srinivasa Murthy VN
Updated On : 3 Aug 2013, 12:37 pm

ಬೈಲುಕುಪ್ಪೆ: ಮಕ್ಕಳಲ್ಲಿರುವ ಪೌಷ್ಟಿಕಾಂಶದ ಕೊರತೆ ನೀಗಿಸಲು, ಮಕ್ಕಳ ಗೈರು ಹಾಜರಿ ತಪ್ಪಿಸಲು ಹಾಲು ವಿತರಣೆ ಹಾಗೂ ಬಿಸಿಯೂಟದಂತಹ ಮಹತ್ವದ ಯೋಜನೆಗಳನ್ನು ಸರ್ಕಾರ ಕೈಗೊಂಡಿರುವುದು ತುಂಬಾ ಸಂತೋಷದ ವಿಷಯ ಎಂದು ಎಸ್ಡಿಎಂಸಿ ಅಧ್ಯಕ್ಷ ಎಂ. ರಾಜು ಹೇಳಿದರು. ಇಲ್ಲಿನ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಹರವೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಪ್ರತಿ ಮಕ್ಕಳಿಗೂ 150 ಎಂ.ಎಲ್ ಹಾಲು ನೀಡಲಾಗುತ್ತದೆ. ಶಾಲೆಯಲ್ಲಿ ಬಿಸಿಯೂಟ ಸಿಬ್ಬಂದಿಗೆ ಹಾಲು ವಿತರಣೆಯ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿಸಿದರು. ಮುಖ್ಯ ಶಿಕ್ಷಕ ಸುಬ್ಬರಾಯಿ, ಶಿಕ್ಷಕರಾದ ರೂಪ, ರಶ್ಮಿ, ಹರೀಶ, ಎಸ್ಡಿಎಂಸಿ ಸದಸ್ಯರಾದ ಆರ್. ಮಹದೇವ, ವೀರಭದ್ರ, ಕುಮಾರ, ಪಾಪಣ್ಣ, ಲಕ್ಷ್ಮಣ, ರಾಜೇಶ ಹಾಗೂ ಸಿಬ್ಬಂದಿ ಇದ್ದರು.

ನೇರಳಕುಪ್ಪೆಯಲ್ಲಿ ಕ್ಷೀರಭಾಗ್ಯ ಯೋಜನೆಗೆ ಚಾಲನೆ
ಹುಣಸೂರು: ಸರ್ಕಾರ ಮಕ್ಕಳಿಗೆ ಬಿಸಿಯೂಟ ಹಾಗು ಕಬ್ಬಿಣಾಂಶದ ಮಾತ್ರೆ ನೀಡುತ್ತಿರುವುದರ ಜೊತೆಗೆ ಈಗ ಪೌಷ್ಟಿಕಯುಕ್ತ ಹಾಲು ನೀಡುತ್ತಿದ್ದು, ದುರುಪಯೋಗಪಡಿಸಿಕೊಳ್ಳದಂತೆ ನೇರಳೆಕುಪ್ಪೆ ಗ್ರಾಪಂ ಅಧ್ಯಕ್ಷೆ ಮುತ್ತಮ್ಮ ಸೂಚಿಸಿದರು.
ಹನಗೋಡು ಹೋಬಳಿಯ ನೇರಳಕುಪ್ಪೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ಸರ್ಕಾರ ಜನತೆಯ ತೆರಿಗೆ ಹಣದಲ್ಲಿ ಹಾಲಿನಪುಡಿ ವಿತರಿಸುತ್ತಿದ್ದು, ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಲು ಶ್ರಮಿಸುವಂತೆ ಶಿಕ್ಷಕರಿಗೆ ಕರೆ ನೀಡಿದರು. ತಾಪಂ ಸದಸ್ಯ ಗಣಪತಿ, ಎಸ್ಡಿಎಂಸಿ ಅಧ್ಯಕ್ಷ ಆನಂದ್, ಗ್ರಾಪಂ ಮಾಜಿ ಉಪಾಧ್ಯಕ್ಷ ಪ್ರಭಾಕರ ಹೆಗ್ಗಡೆ, ಮುಖ್ಯಶಿಕ್ಷಕ ನಾಗರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement