ವಿವಿಧ ಶಾಲೆಗಳಲ್ಲಿ ಕ್ಷೀರಭಾಗ್ಯಕ್ಕೆ ಚಾಲನೆ
ಕ.ಪ್ರ.ವಾರ್ತೆ ಮೈಸೂರು ಆ. 2
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕ್ಷೀರಭಾಗ್ಯ ಯೋಜನೆಯಡಿ ತಾಲೂಕಿನ ಹಾರೋಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಹಾಲು ವಿತರಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ರಾಮಾರಾಧ್ಯ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ಶೋಭಾ, ಶಿಕ್ಷಕ ಲಿಂಗರಾಜು, ಜಯರಾಮು ಇದ್ದರು.
ಮೇಟಗಳ್ಳಿ
ಮೈಸೂರು: ತಾಲೂಕಿನ ಮೇಟಗಳ್ಳಿಯ ಸರ್ಕಾರಿ ಪ್ರೌಢಶಾಲೆ ಮತ್ತು ಕುವೆಂಪು ಶತಮಾನೋತ್ಸವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ಹಾಲು ವಿತರಿಸಲಾಯಿತು. ಡಾ.ಎಚ್.ಕೆ. ರಾಮನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ಬಿಆರ್ಪಿ ಮುರುಳಿ, ಸಿಆರ್ಪಿ ಪಿ.ಸಿ. ನಾಗರಾಜ್, ಮುಖ್ಯ ಶಿಕ್ಷಕರಾದ ಶಂಕರೇಗೌಡ, ಡಿ. ಚಿಕ್ಕಣ್ಣ, ಸಹ ಶಿಕ್ಷಕಿ ಬಿ.ಎಸ್. ನಿರ್ಮಲ, ಎಸ್ಡಿಎಂಸಿ ಅಧ್ಯಕ್ಷ ಎಸ್. ರಘು ಇದ್ದರು.
ಗುಂಗ್ರಾಲ್ ಛತ್ರಮೈಸೂರು: ತಾಲೂಕಿನ ಕಲ್ಲೂರು ನಾಗನಹಳ್ಳಿ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವ ಗುಂಗ್ರಾಲ್ ಛತ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಲಾಯಿತು. ಚಾಲನೆ ನೀಡಿದ ಸಿಆರ್ಪಿ ಗಣೇಶ್ ಮಾತನಾಡಿ, ಮಕ್ಕಳು ಹಾಲು ಕುಡಿಯುವುದರಿಂದ ದೇಹದಲ್ಲಿ ಪೌಷ್ಟಿಕಾಂಶ ವೃದ್ಧಿಯಾಗಿ ಚೆನ್ನಾಗಿ ಓದಬಹುದು. ಪ್ರತಿ ಮಗುವಿಗೂ 150 ಮಿಲೀ ಕೆನೆಭರಿತ ಹಾಲನ್ನು ನೀಡಲಾಗುತ್ತದೆ. 1 ರಿಂದ 10ನೇ ತರಗತಿವರೆಗೆ ವಾರದಲ್ಲಿ ಮೂರು ದಿನ ಹಾಲು ನೀಡಲಾಗುತ್ತದೆ ಎಂದರು. ಎಸ್ಡಿಎಂಸಿ ಅಧ್ಯಕ್ಷೆ ಮಂಗಳ, ಮುಖ್ಯ ಶಿಕ್ಷಕ ನಾಗರಾಜ್ ಅತಿಥಿಯಾಗಿ ಭಾಗವಹಿಸಿದ್ದರು.