ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಉದ್ಯೋಗ ಮೇಳಕ್ಕೆ ಯುವದಂಡು

Srinivasa Murthy VN
Updated On : 5 Aug 2013, 12:38 pm

ಕ.ಪ್ರ.ವಾರ್ತೆ ಮೈಸೂರು ಆ. 4
ಎಂಬಿಬಿ ಟ್ರೈನಿಂಗ್ ಮತ್ತು ಪ್ಲೇಸ್‌ಮೆಂಟ್ ಸರ್ವೀಸ್ ಸಂಸ್ಥೆಯು ಭಾನುವಾರ ನಗರದ ಮಹಾರಾಜ ಕಾಲೇಜಿನಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಸಾವಿರಾರು ಯುವಕ- ಯುವತಿಯರು ಭಾಗವಹಿಸಿದ್ದರು.
ಸುಮಾರು 180ಕ್ಕೂ ಅಧಿಕ ಕಂಪನಿಗಳು ಭಾಗವಹಿಸಿದ್ದ ಮೇಳದಲ್ಲಿ 10ನೇ ತರಗತಿಯಿಂದ ಹಿಡಿದು ಪಿಯುಸಿ, ಐಟಿಐ, ಜೆಒಸಿ, ಡಿಪ್ಲೊಮಾ, ಬಿಎ, ಬಿಕಾಂ, ಬಿಎಸ್ಸಿ, ಬಿಬಿಎಂ, ಬಿಇ, ಎಂಬಿಎ ಪದವೀಧರರು ಭಾಗವಹಿಸಿದ್ದರು. ಪ್ರತಿಷ್ಠಿತ ಯುನಿಲಾಯ್, ಟಿ.ಎಸ್. ಸಲ್ಯೂಷನ್, ಬಿರ್ಲಾ ಸನ್‌ಲೈಫ್, ರಾಮ್‌ಸನ್ಸ್, ರಾಣೆ ಮದ್ರಾಸ್, ಎವೆರಿ ಡೇ, ಇನ್ಫೋಸಿಸ್, ಥಾಟ್ ಫೋಕಸ್, ಎಚ್‌ಜಿಎಸ್, ರಿಲಯನ್ಸ್ ಲೈಪ್ ಇನ್ಶುರೆನ್ಸ್, ಐಟಿ ಚಾಂಪ್ಸ್, ಕೆಫೆ ಕಾಫಿ ಡೇ, ಜೀವನ್ ಟೆಕ್, ಶಾರದಾ ಗುರುಗುಲ್, ಡನ್‌ಲಪ್ ಕಂಪನಿಗಳು ಸಂದರ್ಶನ ನಡೆಸಿದವು. ಇದಕ್ಕೂ ಮೊದಲು ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಹಾರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ. ವಸಂತ್, ಉದ್ಯೋಗಾವಕಾಶಗಳು ಹೆಚ್ಚಾಗಿದ್ದರೂ ಅದನ್ನು ಪಡೆಯುವಲ್ಲಿ ಯುವಜನತೆ ಹಿಂದೆ ಬಿದ್ದಿದ್ದಾರೆ. ಇದಕ್ಕೆ ಹಲವಾರು ಕಾರಣಗಳಿವೆ. ಪ್ರಮುಖವಾಗಿ ಜೀವನ ಕೌಶಲ್ಯಗಳ ಕೊರತೆ ಎದ್ದು ಕಾಣುತ್ತಿದೆ. ಕಂಪನಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬೇಕಾದರೆ ಉದ್ಯೋಗಿಗಳಲ್ಲಿ ಜೀವನ ಕೌಶಲ್ಯಗಳ ಅವಶ್ಯಕತೆ ಇದೆ. ಇದನ್ನು ವಿದ್ಯಾರ್ಥಿಗಳು ಅರಿಯಬೇಕು ಎಂದರು. ಕಾಲೇಜಿನ ಆಡಳಿತಾಧಿಕಾರಿ ಡಾ. ನಾಗರಾಜ ಮೂರ್ತಿ, ಪ್ಲೇಸ್‌ಮೆಂಟ್ ಅಧಿಕಾರಿ ಡಾ. ಲ್ಯಾನ್ಸಿಡಿಸೋಜ, ಎಂಬಿಬಿ ಟ್ರೈನಿಂಗ್ ಮತ್ತು ಪ್ಲೇಸ್‌ಮೆಂಟ್‌ಸರ್ವೀಸ್ ಸಂಸ್ಥೆಯ ಭರತ್‌ರಾಜ್ ಹಾಗೂ ಲಕ್ಷ್ಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement