ಕಾಂಗ್ರೆಸ್‌ನಿಂದ ಮಾತ್ರ ಆಂತರಿಕ ಚುನಾವಣೆ'
ಕ.ಪ್ರ.ವಾರ್ತೆ ಕೆ.ಆರ್. ನಗರ ಆ. 4
ರಾಜಕೀಯ ಪಕ್ಷದ ಅಂತರಿಕ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಮಾತ್ರ ನಡೆಸುತ್ತಿದ್ದು, ಇತರೆ ರಾಜಕೀಯ ಪಕ್ಷಗಳು ಇದುವರೆಗೂ ಅಂತಹ ಚುನಾವಣೆಯನ್ನು ನಡೆಸಿಲ್ಲ ಎಂದು ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ ಹೇಳಿದರು.
ಪಟ್ಟಣದ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಸಭೆಯಲ್ಲಿ ಮಾತನಾಡಿ, ವಿದ್ಯಾವಂತ ಯುವ ಜನತೆ ಕಾಂಗ್ರೆಸ್‌ನ ಸದಸ್ಯತ್ವ ಪಡೆಯುವ ಮೂಲಕ ಪಕ್ಷಕ್ಕೆ ಭವಿಷ್ಯದಲ್ಲಿ ಉತ್ತಮ ನಾಯಕತ್ವ ದೊರಕಿಸಿಕೊಡಬೇಕು. ಯುವ ನಾಯಕ ರಾಹುಲ್‌ಗಾಂಧಿ ಅವರ ಆದೇಶದಂತೆ ಅಂತರಿಕ ಚುನಾವಣೆ ನಡೆಸಲಾಗುತ್ತದೆ ಎಂದರು.
2013- 14ನೇ ಸಾಲಿಗೆ ನಡೆಯಲಿರುವ ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆಗೆ ಸೆ. 5ರವರೆಗೆ ಸದಸ್ಯತ್ವ ಅಭಿಯಾನ ನಡೆಯಲಿದ್ದು, ಯುವಕರು ಪಕ್ಷದ ಸದಸ್ಯತ್ವ ಪಡೆಯಬೇಕೆಂದು ಮನವಿ ಮಾಡಿದರು. ಸದಸ್ಯತ್ವ ನೋಂದಣಿಗೆ 15, ಎಸ್ಸಿ, ಎಸ್ಟಿ ಹಾಗೂ ಮಹಿಳೆಯರಿಗೆ 5 ನಿಗದಿಪಡಿಸಲಾಗಿದೆ. 18 ರಿಂದ 35 ವರ್ಷದೊಳಗಿನ ಯುವ ಜನತೆ ತಮ್ಮ ಜನ್ಮ ದಿನಾಂಕದ ಗುರುತಿನ ಚೀಟಿ ನೀಡಿ ಸದಸ್ಯತ್ವವನ್ನು ಪಡೆಯಬೇಕು ಎಂದು ತಿಳಿಸಿದರು.
ಅಭಿಯಾನ ಮುಗಿದ ನಂತರ ಕ್ಷೇತ್ರದ ಪ್ರತಿ ಬೂತ್‌ಗೆ 5 ಜನ ಪದಾಧಿಕಾರಿಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗುವುದು. ನಂತರ ತಾಲೂಕು ಯುವ ಘಟಕ್ಕೆ ಅಧ್ಯಕ್ಷರನ್ನು ಬೂತ್ ಕಮಿಟಿಯ ಚುನಾಯಿತ ಸದಸ್ಯರು ಚುನಾವಣೆ ಮೂಲಕ ಆಯ್ಕೆ ಮಾಡಲಾಗುವುದು ಎಂದರು.
ಯುವ ಜನತೆಯನ್ನು ಸದಸ್ಯತ್ವಕ್ಕೆ ಒಳಪಡಿಸಲು ಪಕ್ಷವು ಸಮಿತಿಯನ್ನು ರಚಿಸಿದ್ದು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಪಿ. ಆನಂದ್, ಬಿ.ಎಲ್. ರಾಜಶೇಖರ್, ಡಿ. ರವಿಶಂಕರ್, ಅಮಿತ್.ವಿ ದೇವರಹಟ್ಟಿ, ಪ್ರಭುಶಂಕರ್ ಅವರನ್ನು ನೇಮಿಸಲಾಗಿದೆ ಎಂದರು.
ಮಂಡ್ಯ ಲೋಕಸಭಾ ಕ್ಷೇತ್ರದ ವೀಕ್ಷಕ ಜಯರಾಮ್, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್. ಚನ್ನಬಸಪ್ಪ, ಮಾಜಿ ಸದಸ್ಯರಾದ ಮಾರ್ಚಹಳ್ಳಿ ಶಿವರಾಂ, ಡಿ. ರವಿಶಂಕರ್, ತಾಪಂ ಸದಸ್ಯ ಸಣ್ಣಪ್ಪ, ಮಾಜಿ ಉಪಾಧ್ಯಕ್ಷ ಪುಟ್ಟರಾಜು, ಪುರಸಭಾ ಸದಸ್ಯರಾದ ನಟರಾಜ್, ಕೆ.ಜಿ. ಸುಬ್ರಮಣ್ಯ, ಎಪಿಎಂಸಿ ಮಾಜಿ ಸದಸ್ಯ ರಾಜಶೇಖರ್, ಹೆಬ್ಬಾಳು ನಾಗೇಂದ್ರ ಜಾಬೀರ್, ಕಾಳಯ್ಯ ಇದ್ದರು.