ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕ್ಷೀರ ಭಾಗ್ಯ ಯೋಜನೆಗೆ ಚಾಲನೆ

Srinivasa Murthy VN
Updated On : 5 Aug 2013, 12:39 pm

ಕ.ಪ್ರ.ವಾರ್ತೆ ಮೂಗೂರು ಆ. 4
ಶೈಕ್ಷಣಿಕ ವಲಯದಲ್ಲಿ ಕ್ಷೀರ ಭಾಗ್ಯ ಮಹತ್ತರವಾದ ಯೋಜನೆ ಆಗಿದೆ ಎಂದು ಮೂಗೂರಿನ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಬಿ. ಮಹದೇವ ಹೇಳಿದರು. ಗ್ರಾಮದ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಹಾಲು ವಿತರಣಾ ಸಮಾರಂಭದಲ್ಲಿ ಮಾತನಾಡಿ, ನಗರ ಪ್ರದೇಶದ ವಿದ್ಯಾರ್ಥಿಗಳಲ್ಲಿ ಭೌತಿಕ ಬೆಳವಣಿಗೆಯ ವೃದ್ಧಿಯಿಂದ ಪ್ರತಿಭಾವಂತರಾಗುತ್ತಿದ್ದಾರೆ. ಆದರೆ, ಗ್ರಾಮೀಣ ವಿದ್ಯಾರ್ಥಿಗಳು ಇದರಿಂದ ವಂಚನೆಗೊಳ್ಳುತ್ತಿದ್ದಾರೆ. ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ಕ್ಷೀರ ಯೋಜನೆ, ಬಿಸಿಯೂಟ, ಕಬ್ಬಿಣಾಂಶದ ಮಾತ್ರೆ ವಿತರಣೆ ಯೋಜನೆ ಜಾರಿಗೊಳಿಸಿದೆ ಎಂದರು. ವಿದ್ಯಾರ್ಥಿಗಳು ಶೈಕ್ಷಣಿಕ ಸವಲತ್ತನ್ನು ಸದುಪಯೋಗ ಮಾಡಿಕೊಳ್ಳಬೇಕು. ಪೌಷ್ಟಿಕತೆ ಹೊಂದುವ ಜೊತೆಗೆ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಎಸ್‌ಡಿಎಂಸಿ. ಅಧ್ಯಕ್ಷ ಗೌಡ್ರ ಪ್ರಕಾಶ್ ಮಾತನಾಡಿದರು. ಕಾಲೇಜಿನ ಉಪ ಪ್ರಾಂಶುಪಾಲ ಎಂ.ಎಸ್. ಜಗದೀಶ್‌ಮೂರ್ತಿ, ಕಾಲೇಜು ಸಿಬಿಸಿ ಅಧ್ಯಕ್ಷ ಎಂ.ಪಿ. ಮರಿಸ್ವಾಮಿ, ಉಪಾಧ್ಯಕ್ಷ ಎಂ.ಎಂ. ಬಸವಣ್ಣ, ಸಮಿತಿ ಸದಸ್ಯ ನಂಜುಂಡೇಗೌಡ, ಅಧ್ಯಾಪಕರಾದ ಕೇಶವ್, ಕಾವೇರಿ, ಮಂಜುಳ, ಶಂಕರಯ್ಯ, ಮಲ್ಲೇಶ್, ರಮೇಶ್ ಹಾಗೂ ಸಿಬ್ಬಂದಿ ಇದ್ದರು.

ಕಿತ್ತೂರಿನಲ್ಲಿ ಆರಂಭ
ಕಿತ್ತೂರು: ತಿಮ್ಮಾಜಮ್ಮ ಮತ್ತು ಎಸ್. ಕರಿಯಪ್ಪನವರ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಲಾಯಿತು. ಉಪಪ್ರಾಂಶುಪಾಲ ಬಿ.ಜಿ. ಅಶೋಕ್ ಮಾತನಾಡಿ, ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಪೌಷ್ಟಿಕಾಹಾರ ದೊರಯಲು ಇದು ಒಳ್ಳೆಯ ಕಾರ್ಯಕ್ರಮವಾಗಿದೆ. ಆದ್ದರಿಂದ ಶಾಲಾ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಶಾಲಾ ಚಟುವಟಿಕೆಗಳ ತೊಂದರೆಯಾಗದಂತೆ ಮಕ್ಕಳಿಗೆ ಹಾಲು ವಿತರಿಸುವಂತೆ ತಿಳಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ರಾಮೇಗೌಡರು, ಉಪಾಧ್ಯಕ್ಷೆ ಮಂಜುಳ, ಸದಸ್ಯರಾದ ನಟೇಶ, ದಿನೇಶ, ಕಾಂತರಾಜು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ರಾಮಚಂದ್ರ ರಾವ್, ಸಿಆರ್‌ಪಿ ಸೋಮಶೇಖರ್, ವಿಠ್ಠಲಚಾರಿ, ರಾಜಶೇಖರ, ಜಗದೀಶ್, ಜ್ಯೋತಿ, ಹೇಮ ಇದ್ದರು.     

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement