ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರು ಶ್ರಮಿಸಲಿ'

Srinivasa Murthy VN
Updated On : 5 Aug 2013, 12:39 pm

ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಆ. 4
ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರು ಸ್ಪಂದಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ರಾಮಲಿಂಗು ಹೇಳಿದರು.
ಪಟ್ಟಣದ ಶಿಕ್ಷಕರ ಸಭಾಂಗಣದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರಿಗಾಗಿ ಏರ್ಪಡಿಸಿದ್ದ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಸಮಾಲೋಚನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ ಪದ್ಧತಿಯು ಮಕ್ಕಳ ಎಲ್ಲಾ ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡಲು ಸಹಕಾರಿಯಾಗಿದ್ದು, ಶಿಕ್ಷಕರು ಸಮರ್ಪಕವಾಗಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.
ರಾಜ್ಯ ಸಂಪನ್ಮೂಲ ವ್ಯಕ್ತಿ ಆನಂದ್, ಶಿಕ್ಷಕರಲ್ಲಿ ಮೌಲ್ಯ ಮಾಪನದ ಬಗ್ಗೆ ಇರುವ ಸಮಸ್ಯೆ ಹಾಗೂ ಗೊಂದಲಗಳಿಗೆ ಪರಿಹಾರ ಸೂಚಿಸಿದರಲ್ಲದೆ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಪ್ರೌಢಶಾಲಾ ಶಿಕ್ಷಕರ ವಿಭಾಗದ ಬಿಆರ್‌ಪಿ ಎಂ. ಮಹೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಪರಮಶಿವಯ್ಯ, ತಾಲೂಕಿನ ವಿವಿಧ ಪ್ರೌಢ ಶಾಲೆಗಳ 80ಕ್ಕೂ ಹೆಚ್ಚು ಮಂದಿ ಸಹಶಿಕ್ಷಕರು ಭಾಗವಹಿಸಿದ್ದರು.

ಬೈಪಾಸ್ ರಸ್ತೆ ನಿರ್ಮಾಣಕ್ಕೆ ನಿವಾಸಿಗಳ ಆಗ್ರಹ
ನಂಜನಗೂಡು: ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿರುವ ರಾಜ್ಯ ಹೆದ್ದಾರಿ 57 ಅನ್ನು ಬೈಪಾಸ್ ರಸ್ತೆಯಾಗಿ ಮಾಡುವಂತೆ ಗ್ರಾಮದ ಸಂಗಮ ರಸ್ತೆಯ ನಿವಾಸಿಗಳು ಮನವಿ ಮಾಡಿದ್ದಾರೆ.
ಸಂಗಮ ರಸ್ತೆಯು ಲೋಕೋಪಯೋಗಿ ಇಲಾಖೆಗೆ ಸೇರಿದ ಎಂಡಿಆರ್ ರಸ್ತೆಯಾಗಿದ್ದು, ಈ ಸದರಿ ರಸ್ತೆಯನ್ನು ಈಗ ಸಕಾರಣವಿಲ್ಲದೆ ರಾಜ್ಯ ಹೆದ್ದಾರಿಗೆ ಸೇರಿಸಿ, ಬಾಗಲಕೋಟೆ- ಬಿಳಿಗಿರಿರಂಗನ ಬೆಟ್ಟ, ಎಸ್‌ಎಚ್-57ರಂತೆ ರಾಜ್ಯ ಹೆದ್ದಾರಿಯನ್ನಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ನಿವಾಸಿಗಳಾದ ನಮ್ಮನ್ನು ಯಾವುದೆ ಅಭಿಪ್ರಾಯ ಕೇಳಿಲ್ಲ ಮತ್ತು ಸೂಚನೆ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಸದರಿ ರಸ್ತೆಯು ಅತ್ಯಂತ ಕಿರಿದಾಗಿದ್ದು, ರಾಜ್ಯ ಹೆದ್ದಾರಿಯಾಗಿ ಪರಿವರ್ತಿಸಲು ಸೂಕ್ತವಾಗಿಲ್ಲ. ಇಲ್ಲಿ ಪುರಾತನ ಕಾಲದ ಗಣಪತಿ ಹಾಗೂ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಗಳು ಇರುತ್ತವೆ ಹಾಗೂ ದಲಿತರ ಕಾಲೋನಿಯು ಇದ್ದು, ರಸ್ತೆ ನಿರ್ಮಾಣ ಮಾಡಲು ಹೊರಟರೆ ದೇವಸ್ಥಾನ ಹಾಗೂ ವಾಸದ ಮನೆಗಳನ್ನು ಕೆಡವಬೇಕಾಗುತ್ತದೆ ಎಂದು ಹೇಳಲಾಗಿದೆ.
ಸರ್ಕಾರವು ಕೂಡಲೆ ಹುಲ್ಲಹಳ್ಳಿಯ ಊರ ಒಳಗಡೆ ಹಾದು ಹೋಗುವ ಸದರಿ ರಸ್ತೆಯನ್ನು ಯಥಾಸ್ಥಿತಿಯಂತೆ ಡಾಂಬರೀಕರಣ ಮಾಡಿ, ಊರ ಹೊರಗೆ ಕಾಲುವೆ ಏರಿ ಮೇಲಿಂದ ಭಾರಿ ವಾಹನಗಳು ಹೋಗಲು ರಾಜ್ಯ ಹೆದ್ದಾರಿಯನ್ನು ನಿರ್ಮಿಸಿ, ಹುಲ್ಲಹಳ್ಳಿಯ ಸಂಗಮ ರಸ್ತೆಯ ನಿವಾಸಿಗಳಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement