ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮರಳು ಸಮಸ್ಯೆ: ಲಾರಿ ಮಾಲೀಕರ ಮುಷ್ಕರ ಶುರು

Srinivasa Murthy VN
Updated On : 20 Aug 2013, 1:32 am

ಮೈಸೂರು:  ಮರಳು ಸಾಗಿಸಲು ಲಾರಿ ಮಾಲೀಕರಿಗೆ ಪರ್ಮಿಟ್ ನೀಡುವುದನ್ನು ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಹಾಗೂ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸೋಮವಾರ ಮಧ್ಯರಾತ್ರಿಯಿಂದಲೇ ಮುಷ್ಕರ ಹಮ್ಮಿಕೊಳ್ಳಲು ಮೈಸೂರು ನಗರ ಸ್ಥಳೀಯ ಲಾರಿ ಮಾಲೀಕರ ಸಂಘದವರು ತೀರ್ಮಾನಿಸಿದ್ದಾರೆ.
ನಂಜನಗೂಡು ರಸ್ತೆಯಲ್ಲಿರುವ ಲಾರಿ ತಂಗುದಾಣದಲ್ಲಿ ಸಭೆ ಸೇರಿದ ಅವರು, ಜಿಲ್ಲಾಡಳಿತವು ಲಾರಿ ಮಾಲೀಕರಿಗೆ 1 ತಿಂಗಳಿಂದ ಮರಳು ಸಾಗಾಣಿಕೆ ರಹದಾರಿ ವಿತರಣೆಯನ್ನು ಸ್ಥಗಿತಗೊಳಿಸಿದೆ. ತಿಂಗಳಿಗೆ 2-3 ರಹದಾರಿಗಳನ್ನು ಮಾತ್ರ ನೀಡಲಾಗುತ್ತಿತ್ತು. ಇದರಿಂದ ತೊಂದರೆ ಆಗುತ್ತಿದೆ ಎಂದು ಆರೋಪಿಸಿದರು.
ಮೈಸೂರು ನಗರ ಸ್ಥಳೀಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ. ರೇವಣ್ಣ ಮಾತನಾಡಿ, ರಹದಾರಿ ನೀಡುವಂತೆ, ಪೊಲೀಸರ ಕಿರುಕುಳ ತಪ್ಪಿಸುವಂತೆ, ಡೀಸೆಲ್ ಹಾಗೂ ಇನ್ನಿತರ ವಸ್ತುಗಳ ದರ ಹೆಚ್ಚಳವಾಗಿರುವುದರಿಂದ ಲಾರಿ ಬಾಡಿಗೆಯನ್ನು 3800 ರಿಂದ 5,000ಗೆ ಹೆಚ್ಚಿಸಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ನಮ್ಮ ಬೇಡಿಕೆ ಈಡೇರಿಸುವವರೆಗೂ ಮರಳು ಲಾರಿ ಸಂಚಾರವನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುವುದಾಗಿ ಅವರು ತಿಳಿಸಿದರು.
ಮುಷ್ಕರದಲ್ಲಿ 1700 ಲಾರಿಗಳು: ಮೈಸೂರು ಲಾರಿ ಮಾಲೀಕರ ಸಂಘ, ಟಿ. ನರಸೀಪುರ ತಾಲೂಕು ಲಾರಿ ಮಾಲೀಕರ ಸಂಘ, ಕಟ್ಟಡ ಸಾಮಗ್ರಿಗಳ ಕಾರ್ಮಿಕರ ಸಂಘ ಮತ್ತು ಕೆ.ಆರ್. ಸಾಗರ ಲಾರಿ ಮಾಲೀಕರ ಸಂಘದ ಜತೆಗೆ ಮುಷ್ಕರ ನಡೆಸಲಾಗುವುದು. ಒಟ್ಟು 1700 ಲಾರಿಗಳಿದ್ದು, ಇವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದರು.
ಮೈಸೂರು ನಗರ ಸ್ಥಳೀಯ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ಅಬ್ದುಲ್ ಜಾವೀದ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಷರೀಫ್, ಖಜಾಂಚಿ ಎಚ್.ಎಸ್. ಕೃಷ್ಣಮೂರ್ತಿ, ಪುಟ್ಟಸ್ವಾಮಿ, ಲಿಂಗರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement