ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎಸ್‌ಐ, ಚಾಲಕ ಲೋಕಾ ಬಲೆಗೆ

Srinivasa Murthy VN
Updated On : 22 Aug 2013, 1:16 am

ಕ.ಪ್ರ.ವಾರ್ತೆ ಮೈಸೂರು ಆ. 21
ಮರಳು ಲಾರಿ ಮಾಲೀಕರಿಂದ ಲಂಚ ಸ್ವೀಕರಿಸುತ್ತಿದ್ದ ಎಸ್‌ಐ ಮತ್ತು ಜೀಪ್ ಚಾಲಕ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ಮೈಸೂರು ದಕ್ಷಿಣ ಪೊಲೀಸ್ ಠಾಣೆ ಎಸ್‌ಐ ವೆಂಕಟೇಶಯ್ಯ ಮತ್ತು ಜೀಪ್ ಚಾಲಕ ಎಂ. ಮಹದೇವ ಅ. ಪುಟ್ಟ ಎಂಬವರೇ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಮೈಸೂರು ಜಿಲ್ಲೆಯ ಕೆಂಪಯ್ಯನಹುಂಡಿ ನಿವಾಸಿ ನವೀನ್ ಮತ್ತು ಅವರ ಸ್ನೇಹಿತ ಬಾಲಚಂದ್ರ ಎಂಬವರು ಟಿ. ನರಸೀಪುರದಲ್ಲಿ ಮರಳು ಖರೀದಿಸಿ ಟ್ರಕ್‌ನಲ್ಲಿ ಮೈಸೂರಿಗೆ ಸಾಗಿಸುತ್ತಿದ್ದರು. ಈ ಇಬ್ಬರನ್ನು ವೆಂಕಟೇಶಯ್ಯ ಮಂಗಳವಾರ ಠಾಣೆಗೆ ಕರೆಯಿಸಿಕೊಂಡು ತನಗೆ ತಿಂಗಳಿಗೆ 5000 ಹಾಗೂ ತನ್ನ ಜೀಪ್ ಚಾಲಕನಿಗೆ 1000 ನೀಡಬೇಕು ಒತ್ತಾಯಿಸಿದ್ದರು. ಬಾಲಚಂದ್ರನಿಂದ ಹಣ ಪಡೆದುಕೊಂಡಿದ್ದಾರೆ.ನವೀನ್ ಅವರಿಂದ ಮೈಸೂರು ತಾಲೂಕು ಮೇಗಳಾಪುರ ಉಪ ಠಾಣೆಯಲ್ಲಿ ಬುಧವಾರ ಸಂಜೆ 6ಕ್ಕೆ ಎಸ್‌ಐ ವೆಂಕಟೇಶಯ್ಯ 5000 ಹಾಗೂ ಜೀಪ್ ಚಾಲಕರಾದ ಎಎಚ್‌ಸಿ ಎಂ. ಮಹದೇವ ಅ. ಪುಟ್ಟ 2000 ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಹಣ ಸಮೇತ ಇಬ್ಬರನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ಮೈಸೂರು ವಿಭಾಗದ ಎಸ್ಪಿ ಎಸ್.ಎಂ. ಜಗದೀಶ್‌ಪ್ರಸಾದ್ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಜಿ. ಗೋಪಾಲಕೃಷ್ಣ, ಕೆ.ಟಿ. ಮ್ಯಾಥ್ಯೂಸ್ ಥಾಮಸ್, ಟಿ. ನಟರಾಜ್ ಮತ್ತು ಸಿಬ್ಬಂದಿ ನಿರಂಜನ್, ನಾರಾಯಣ, ಪಾಂಡುರಂಗ, ವೀರಭದ್ರಸ್ವಾಮಿ, ಪುಟ್ಟಣ್ಣ, ಶಿವಶಂಕರ್, ನರಸೇಗೌಡ, ಆನಂದರಾವ್ ಸಿಂಧ್ಯಾ, ಬಸವರಾಜಸ್ವಾಮಿ, ಕುಮಾರಾರಾಧ್ಯ, ಮಹೇಶ್ ಈ ದಾಳಿಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement