ಈಜಿಪ್ಟ್ನಲ್ಲಿ ದೌರ್ಜನ್ಯ ಖಂಡಿಸಿ ಪಿಎಫ್ಐ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಆ. 22
ಪ್ರತಿಭಟನಾಕಾರರನ್ನು ಕ್ರೂರವಾಗಿ ಹತ್ಯೆ ಮಾಡುತ್ತಿರುವ ಈಜಿಪ್ಟ್ನ ಮಧ್ಯಂತರ ಸರ್ಕಾರದ ದೌರ್ಜನ್ಯ ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಾರ್ಯಕರ್ತರು ಗಾಂಧಿ ಚೌಕದಲ್ಲಿ ಗುರುವಾರ ಪ್ರತಿಭಟಿಸಿದರು.
ಈಜಿಪ್ಟ್ನಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಗೆ ಹುತಾತ್ಮರಾಗುತ್ತಿರುವ ಚಳವಳಗಾರರಿಗೆ ಶ್ರದ್ಧಾಂಜಲಿ ಅರ್ಪಿಸಬೇಕು.
ಈಜಿಪ್ಟ್ನಲ್ಲಿ ಸೇನಾ ನಿಯಂತ್ರಿತ ಸರ್ಕಾರದಿಂದ ಭಾರತವು ತನ್ನ ರಾಯಭಾರಿಯನ್ನು ವಾಪಸ್ ಕರೆಸಿಕೊಳ್ಳಬೇಕು. ಈಜಿಪ್ಟ್ನ ಮಿಲಿಟರಿ ಸರ್ಕಾರವು ಅನುಸರಿಸುತ್ತಿರುವ ಕ್ರಮ ಅಮಾನವೀಯ ಬಲಪ್ರಯೋಗ ವಿಶ್ವಶಾಂತಿ ಸೌಹಾರ್ದತೆಗೆ ಅಪಾಯಕಾರಿ ನಿರ್ಧರಿಸಬೇಕು ಎಂದು ಆಗ್ರಹಿಸಿದರು.
ಈಜಿಪ್ಟ್ ಹತ್ಯಾಕಾಂಡದ ಹಿನ್ನೆಲೆಯಲ್ಲಿ ತುರ್ತಾಗಿ ಅಲ್ಲಿನ ಸರ್ಕಾರದ ಹಿಂಸಾತ್ಮಕ ಮಾರ್ಗದ ವಿರುದ್ಧ ಕಠಿಣ ನಿಲುವು ಕೈಗೊಳ್ಳುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮೇಲೆ ಒತ್ತಡ ಹೇರಬೇಕು. ಈಜಿಪ್ಟ್ ಅಭಿವೃದ್ಧಿ ಕಾರ್ಯಗಳಿಗೆ ನೀಡುತ್ತಿರುವ ಎಲ್ಲ ರೀತಿಯ ನೆರವು ಬೆಂಬಲ ಕರಾರು ಒಪ್ಪಂದಗಳನ್ನು ಕೂಡಲೇ ಸ್ಥಗಿತಗೊಳಿಸಬೇಕು. ಅಮೆರಿಕಾ ನೀಡುತ್ತಿರುವ ವಾರ್ಷಿಕ 1.5 ಶತಕೋಟಿ ಡಾಲರ್ ನೆರವು ಕುರಿತು ಅಂತಾರಾಷ್ಟ್ರೀಯ ನ್ಯಾಯಾಲಯದಿಂದ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಪಿಎಫ್ಐ ಜಿಲ್ಲಾಧ್ಯಕ್ಷ ಮೊಹಮ್ಮದ್ ಕಲೀಂ ಉಲ್ಲಾ, ಕಾರ್ಯದರ್ಶಿ ಅಮೀನ್ ಸೇಠ್, ಖಜಾಂಚಿ ಸೈಯದ್ ಹುಸೇನ್, ಎಸ್ಡಿಪಿಐ ಮುಖಂಡ ಪ್ರೊ. ಶಬ್ಬೀರ್ ಮೊಹಮ್ಮದ್ ಮುಸ್ತಫಾ ಇದ್ದರು.