ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಲಾರಿ ಮಾಲೀಕರ ಬೇಡಿಕೆ ಈಡೇರಿಕೆಗೆ ಒತ್ತಾಯ

Srinivasa Murthy VN
Updated On : 22 Aug 2013, 10:29 am

ಕ.ಪ್ರ.ವಾರ್ತೆ ಟಿ.ನರಸೀಪುರ ಆ. 22
ಜಿಲ್ಲಾಡಳಿತ ಮುಷ್ಕರನಿರತ ಲಾರಿ ಮಾಲೀಕರ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಎಂದು ತಾಲೂಕು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೋಸಲೆ ಎಂ. ಪುಟ್ಟಸ್ವಾಮಿ ಹೇಳಿದರು. ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಗುರುವಾರ ನಡೆದ ಸಂಘದ ಸಭೆಯ ನಂತರ ಸುದ್ದಿಗೋಷ್ಠಜಿಯಲ್ಲಿ ಮಾತನಾಡಿ, ಮರಳು ಸಾಗಾಣಿಕೆಗೆ ದಿನಕ್ಕೊಂದು ಪರ್ಮಿಟ್, ಸಾಗಾಣಿಕೆ ವೆಚ್ಚ ಏರಿಕೆ ಮಾಡುವುದು ಸೇರಿದಂತೆ ನಾಲ್ಕೈದು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಲಾರಿ ಮಾಲೀಕರು ಮುಷ್ಕರ ನಡೆಯುತ್ತಿರುವುದರಿಂದ ಮರಳು ಸಮಿತಿ ಹಾಗೂ ಜಿಲ್ಲಾಡಳಿತ ನಮ್ಮ ಹೋರಾಟಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು. ಜಿಲ್ಲೆಯಲ್ಲಿ ಮರಳಿನ ಅಭಾವ ಮುಂದಿಟ್ಟುಕೊಂಡು ಅಧಿಕ ದರಕ್ಕೆ ಮರಳು ಮಾರಾಟ ಮಾಡಿರುವ ಬಗ್ಗೆ ಇದುವರೆಗೂ ಯಾವುದೇ ಗ್ರಾಹಕರು ದೂರು ನೀಡಿಲ್ಲವಾದರೂ ಲಾರಿಗಳಿಗೆ ಸಮರ್ಪಕವಾಗಿ ಮರಳು ಪೂರೈಕೆ ಮಾಡದ ಜಿಲ್ಲಾ ಮರಳು ಸಮಿತಿ ಕಾರ್ಯದರ್ಶಿಗಳು ಲಾರಿ ಮಾಲೀಕರ ಮುಷ್ಕರದ ನಡುವೆಯೂ ಗ್ರಾಹಕರಿಗೆ ಮರಳನ್ನು ಪೂರೈಕೆ ಮಾಡಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂಬ ಸುಳ್ಳು ಹೇಳಿಕೆ ನೀಡಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಸಂಘದ ಉಪಾಧ್ಯಕ್ಷ ಕಲೀಲ್, ಲಾರಿ ಮಾಲೀಕರಾದ ಜಿಯಾವುಲ್ಲಾ, ಮುಬಿವುಲ್ಲಾ, ಜೋಗಿ ಕೃಷ್ಣ, ಇಂಡವಾಳು ಮಲ್ಲೇಶ್, ಮಹೇಶ್ ಇದ್ದರು.

ಪಿರಿಯಾಪಟ್ಟಣದಲ್ಲಿ ಶೇ. 99 ಮತದಾನ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಆ. 22

ಮೈಸೂರು- ಚಾಮರಾಜನಗರ ವಿಧಾನಪರಿಷತ್‌ಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಉಪ ಚುನಾವಣೆಗೆ ತಾಲೂಕಿನಲ್ಲಿ ಒಟ್ಟು ಶೇ. 99.44 ರಷ್ಟು ಮತದಾನವಾಗಿದೆ.
ತಾಲೂಕಿನ 26 ಗ್ರಾಪಂ, 1 ಪಪಂ, 1 ತಾಪಂ ಸದಸ್ಯರ ಮತಗಳು, ಶಾಸಕರ ಒಂದು ಮತ ಸೇರಿ ಒಟ್ಟು 537 ಮತದಾರರಿದ್ದು, ಈ ಪೈಕಿ ಒಟ್ಟು 534 ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. 306 ಪುರುಷ ಮತದಾರರ ಪೈಕಿ 303 ಮಂದಿ ಪುರುಷರು ಮತ ಚಲಾಯಿಸಿದ್ದು, 231 ಮಹಿಳಾ ಮತದಾರರೂ ತಮ್ಮ ಹಕ್ಕು ಚಲಾಯಿಸಿದ್ದಾರೆ. ತಾಲೂಕಿನ ಹಲಗನಹಳ್ಳಿ, ಬೆಟ್ಟದಪುರ ಹಾಗೂ ದೊಡ್ಡಕಮರವಳ್ಳಿ ಗ್ರಾಪಂಗಳ ತಲಾ ಒಬ್ಬ ಪುರುಷ ಮತದಾರರು ಮತ ಚಲಾಯಿಸಿಲ್ಲ. ತಾಪಂ ಉಪಾಧ್ಯಕ್ಷರ ಕಚೇರಿಯಲ್ಲಿ ತೆರೆಯಲಾಗಿದ್ದ ಮತಗಟ್ಟೆಯಲ್ಲಿ ಶಾಸಕ ಕೆ. ವೆಂಕಟೇಶ್ ಮತದಾನ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement