ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ವಿರೋಧಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಆ. 24
ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಕರ್ನಾಟಕ ಜನಪರ ಶಕ್ತಿ ವೇದಿಕೆಯವರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟಿಸಿದರು.
ಈ ಹಿಂದಿನ ಸರ್ಕಾರವು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿತ್ತು. ಆದರೆ, ಈಗಿನ ಸರ್ಕಾರವು ಕಾಯ್ದೆಯನ್ನು ಹಿಂಪಡೆದಿರುವುದು ನೋವಿನ ಸಂಗತಿ. ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ವೇದಿಕೆಯ ಅಧ್ಯಕ್ಷೆ ಆರ್.ಮಧುಮತಿ, ಕಾರ್ಯದರ್ಶಿ ಕೆ.ಸುಧಾಮಣಿ, ಮುಖಂಡರಾದ ದಿನೇಶ್ ನಾಯಕ್, ಮಂಜುನಾಥ್, ಮೀನಾ, ಮಂಜುಳಾ, ಕವಿತಾ, ರಾಜಪ್ಪ, ಕೆ.ಎಂ. ಸುಧಾಮಣಿ, ಮಹದೇವ, ಸರಸ್ವತಿ, ಮಂಜುಳಾ, ಜಯ, ಜಿ.ಗೀತಾ ಇದ್ದರು.