ಸಹಕಾರ ಸಂಘ ಚುನಾವಣೆ ಜಿದ್ದಾಜಿದ್ದಿ
ಕ.ಪ್ರ.ವಾರ್ತೆ ಕೆ.ಆರ್. ನಗರ ಆ. 27
ತಾಲೂಕಿನ ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಸೆ. 1ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ 40 ಉಮೇದುವಾರರ ಪೈಕಿ 12 ಮಂದಿ ತಮ್ಮ ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ 28 ಮಂದಿ ಕಣದಲ್ಲಿದ್ದಾರೆ.
ಸಾಲಗಾರರ ಕ್ಷೇತ್ರದಿಂದ 26 ಮಂದಿ, ಸಾಲಗಾರರಲ್ಲದ ಕ್ಷೇತ್ರದಿಂದ ಇಬ್ಬರು ಕಣದಲ್ಲಿದ್ದು, ಮನೆ- ಮನೆಗೆ ತೆರಳಿ ಮತಯಾಚನೆಯಲ್ಲಿ ತೊಡಗಿರುವುದರಿಂದ ಸಹಕಾರ ಸಂಘದ ಚುನಾವಣೆ ಕಣ ರಂಗೇರಿದೆ.
ಎಚ್.ಆರ್. ಮಹೇಶ್, ಎಚ್.ಟಿ. ಪ್ರಮೋದ್, ಎಲ್. ರವಿ, ಸಿ.ಡಿ. ಪ್ರಭಾಕರ, ಎಚ್.ಟಿ. ಗೋಪಾಲೇಗೌಡ, ಜವರಯ್ಯ, ಡಿ.ಆರ್. ರಮೇಶ್, ಎಚ್.ಆರ್. ದಿನೇಶ್, ಎಸ್.ಬಿ. ಹುಚ್ಚೇಗೌಡ, ಕೃಷ್ಣಸ್ವಾಮಿ, ಕಮಲಮ್ಮ, ಡಿ. ರಾಮಕೃಷ್ಣೇಗೌಡ, ಪೂರ್ಣಚಂದ್ರ, ಎಚ್.ಎಸ್. ಶ್ರೀನಿವಾಸ್, ಮೀನಾಕ್ಷಿ, ಪಾಲಾಕ್ಷ, ಎಚ್.ಆರ್. ಪರಶುರಾಮ್, ರಾಮಕೃಷ್ಣ, ಎಚ್.ಕೆ. ಪ್ರಭಾಕರ್, ಸದಾಶಿವಕೀರ್ತಿ, ಎಚ್.ಸಿ. ಶ್ರೀನಿವಾಸ್, ಪುಟ್ಟಲಕ್ಷ್ಮಮ್ಮ, ಕೆ. ಮಹದೇವ್, ಗೋವಿಂದಯ್ಯ, ಸರಸ್ವತಿ, ಚಂದ್ರಾವತಿ, ಸಾಲಗಾರರ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಎಸ್.ಟಿ. ಕೀರ್ತಿ, ಎಚ್.ಆರ್. ಶಿವರಾಮೇಗೌಡ ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ಧೆಯಲ್ಲಿದ್ದಾರೆ.
28 ಮಂದಿ ಕಣದಲ್ಲಿರುವುದರಿಂದ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದ್ದು, ಕಾಂಗ್ರೆಸ್ ಬೆಂಬಲಿತರು, ಜೆಡಿಎಸ್ ಬೆಂಬಲಿತರು ಮತ್ತು ಇತರರು ಗುಂಪು ರಚಿಸಿಕೊಂಡು ಮತಯಾಚಿಸುತ್ತಿದ್ದು, ಸಂಘದ ಸದಸ್ಯ ರೈತರ ಮನವೊಲಿಕೆಯಲ್ಲಿ ತೊಡಗಿದ್ದು, ಬಹುತೇಕ ಹೊಸಬರೆ ಸ್ಪರ್ಧಿಸಿರುವುದು ಈ ಬಾರಿ ಚುನಾವಣೆಯ ವಿಶೇಷ.
ಸಾಲಗಾರರ ಕ್ಷೇತ್ರದ 9 ಸ್ಥಾನಕ್ಕೆ ಸಾಲಗಾರರಲ್ಲದ ಕ್ಷೇತ್ರದಿಂದ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಬ್ಯಾಂಕ್ ವ್ಯಾಪ್ತಿಗೆ ಒಳಪಡುವ 11 ಗ್ರಾಮಗಳಲ್ಲಿಯೂ ಚುನಾವಣಾ ರಂಗು ತಾರಕಕ್ಕೇರಿದೆ.