ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಲಾಪದಿಂದ ಹೊರಗುಳಿದ ವಕೀಲರು

Srinivasa Murthy VN
Updated On : 28 Aug 2013, 11:58 am

ಮೈಸೂರು: ನ್ಯಾಯಾಲಯದ ಶಿರಸ್ತೇದಾರ್ ವರ್ಗಾವಣೆಗೆ ಒತ್ತಾಯಿಸಿ ವಕೀಲರು ಎರಡು ದಿನ ಕಲಾಪದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ನಗರದ ನ್ಯಾಯಾಲಯದಲ್ಲಿ ಶಿರಸ್ತೇದಾರ್ ಆಗಿ ಕೆಲಸ ನಿರ್ವಹಿಸುತ್ತಿರುವ ನಾಗೇಂದ್ರಪ್ರಸಾದ್ ಅವರನ್ನು ಕೂಡಲೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಬುಧವಾರ ಮತ್ತು ಗುರುವಾರದ ಕಲಾಪಗಳಿಂದ ಹೊರಗುಳಿಯಲು ವಕೀಲರ ಸಂಘದ ಸರ್ವಸದಸ್ಯರ ಸಭೆ ತೀರ್ಮಾನಿಸಿತ್ತು. ಆದರೆ ಸಂಘದ ತೀರ್ಮಾನದ ನಡುವೆಯೂ ಕಲಾಪದಲ್ಲಿ ಭಾಗವಹಿಸಿದ್ದ ಇಬ್ಬರು ವಕೀಲರನ್ನು ಸಂಘದ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ. ನಂಜನಗೂಡಿಗೆ ವರ್ಗಾಹಿಸಿದ್ದ ನಾಗೇಂದ್ರ ಪ್ರಸಾದ್ ಅವರನ್ನು ಮತ್ತೆ ಮೈಸೂರಿನ ನ್ಯಾಯಾಲಯಕ್ಕೆ ಕರೆಸಿಕೊಂಡಿರುವುದು ಸರಿಯಲ್ಲ. ಆದ್ದರಿಂದ ಕೂಡಲೆ ಅವರನ್ನು ವರ್ಗಾಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ
ಹುಣಸೂರು: ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್. ಧರ್ಮಸೇನ ಜಯಗಳಿಸಿದ ಹಿನ್ನೆಲೆ ಪಟ್ಟಣದ ಕಾಂಗ್ರೆಸ್ ಕಚೇರಿ ಎದುರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜಿಪಂ ಸದಸ್ಯೆ ಡಾ. ಪುಷ್ಪಾವತಿ ಅಮರನಾಥ್ ಮಾತನಾಡಿ, ಕೇಂದ್ರದ ಯುಪಿಎ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಕಾಳಜಿ ಮೆಚ್ಚಿ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭೆ ಹಾಗೂ ವಿಧಾನಪರಿಷತ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು, ಜಿಪಂ ಸದಸ್ಯ ರಮೇಶ್, ಪುರಸಭಾ ಸದಸ್ಯರಾದ ಸುನಿತಾ ಜಯರಾಮೇಗೌಡ, ನರಸಯ್ಯ, ಜಾಕೀರ್ ಹುಸೇನ್, ಮುಖಂಡರಾದ ಎಸ್. ಜಯರಾಮ್, ಯೋಗಾನಂದ, ಎಚ್.ಪಿ. ಅಮರನಾಥ್, ಗುರುಸ್ವಾಮಿ, ಪರಮೇಶ್, ಆಂಡಿ, ಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement