ಯುವಕರು ಸುಖದ ಚಪಲ ಬಿಡಬೇಕು: ಪ್ರೊ.ಮಲೆಯೂರು
ಮೈಸೂರು: ಯುವಕರು ಸುಖದ ಬೆನ್ನು ಹತ್ತಿ ಹೋಗುವ ಚಪಲ ಬಿಡಬೇಕು ಎಂದು ಲೇಖಕ ಪ್ರೊ.ಮಲೆಯೂರು ಗುರುಸ್ವಾಮಿ ಹೇಳಿದರು. ನೆಹರು ಯುವ ಕೇಂದ್ರ ಮತ್ತು ಅಭ್ಯುದಯ ಮಹಿಳಾ ಸಮಾಜವು ಜೆ.ಪಿ. ನಗರದ ಪುಟ್ಟರಾಜ ಗವಾಯಿ ಕ್ರೀಡಾಂಗಣದ ಮಹಿಳಾ ಸಮಾಜದ ಕಚೇರಿಯಲ್ಲಿ ಆಯೋಜಿಸಿದ್ದ ಅಂತರ ಜಿಲ್ಲಾ ರಾಷ್ಟ್ರೀಯ ಯುವ ಪಡೆಯ ಸ್ವಯಂ ಸೇವಕರ ತರಬೇತಿ ಶಿಬಿರದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ಸಂತೋಷ ಮಾನಸಿಕವಾದದ್ದು. ಆದರೆ ಸುಖ ದೈಹಿಕ ಮತ್ತು ತಾತ್ಕಾಲಿಕವಾದದ್ದು. ಯುವಕರು ಭ್ರಮೆಯಲ್ಲಿ ತೇಲುವುದನ್ನು ಬಿಡಬೇಕು. ಸುಖದ ಬೆನ್ನುಹತ್ತಿ ಹೋಗುವ ಚಪಲ ಬಿಡಬೇಕು ಎಂದರು.
'ಮಾನಸಿಕ ಆರೋಗ್ಯ ಸೇವೆ ಸಮರ್ಪಕ ಅನುಷ್ಠಾನ'
ರಾಮನಗರ: ಮಾನಸಿಕ ಆರೋಗ್ಯ ಸೇವೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ರಾಜ್ಯವನ್ನು ದೇಶದಲ್ಲೇ ಮಾದರಿಯಾಗಿ ರೂಪಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾನಸಿಕ ಆರೋಗ್ಯ ಪಡೆ ಅಧ್ಯಕ್ಷ ಅಶೋಕ್ ಪೈ ತಿಳಿಸಿದರು. ನಗರದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯ ಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಅವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಹೇಳಿದರು. ದೇಶದ 12 ಕೋಟಿ ಜನಸಂಖ್ಯೆಗೆ ಕೇವಲ 9 ಸಾವಿರ ಮನೋ ವೈದ್ಯರಷ್ಟೇ ಇದ್ದಾರೆ. 1.10 ಲಕ್ಷ ಜನರಿಗೆ ಒಬ್ಬ ಮನೋವೈದ್ಯರು ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಇದೆ. ಇದರಿಂದ ಸೂಕ್ತ ಚಿಕಿತ್ಸೆ ನೀಡಲು ಸಮಸ್ಯೆ ಎದುರಾಗಿದೆ ಎಂದು ವಿವರಿಸಿದರು. ರಾಜ್ಯದ ಹಲವಾರು ಜಿಲ್ಲಾಸ್ಪತ್ರೆಗಳಲ್ಲಿ ಮನೋವೈದ್ಯ ವಿಭಾಗವೇ ಅನುಷ್ಠಾನದಲ್ಲಿಲ್ಲ. ರಾಜ್ಯದಲ್ಲಿ ಪ್ರತಿ ವರ್ಷ 40 ಮನೋವೈದ್ಯರಿಗೆ ತರಬೇತಿ ನೀಡಲಾಗುತ್ತಿದೆಯಾದರೂ ಬಹುತೇಕರು ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 180 ವೈದ್ಯರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ನಾಟಕ ನಿರ್ದೇಶಕ ಸಣ್ಣೇಗೌಡ ನಿಧನ
ಹಾಸನ: ಅನಿಕೇತನ ನಾಟಕ ತಂಡದ ನಿರ್ದೇ ಶಕ ಹಾಗೂ ಕೆಜಿಐಡಿ ಇಲಾಖೆ ನೌಕರ ಕೆ. ಸಣ್ಣೇಗೌಡ (57) ಅವರು ಬುಧ ವಾರ ಬೆಂಗ ಳೂರಿನ ಸೇಂಟ್ಜಾನ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 10 ವರ್ಷಗಳ ಹಿಂದೆ 2 ಮೂತ್ರಪಿಂಡಗಳ ವೈಫಲ್ಯ ಆಗಿತ್ತು. ಅವರ ಹಿರಿಯ ಸಹೋದರಿ ಒಂದು ಮೂತ್ರಪಿಂಡ ದಾನ ಮಾಡಿದ್ದರು. ಅನೇಕ ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲಿದ್ದರೂ, ನಾಟಕದ ಗೀಳು ಅವರನ್ನು ಇಲ್ಲಿಯ ತನಕ ಎಳೆದು ತಂದಿತ್ತು. ಒಂದು ತಿಂಗಳ ಹಿಂದೆ ಮತ್ತೆ ಮೂತ್ರಪಿಂಡ ವಿಫಲವಾದುದ್ದಲ್ಲದೇ ಹೃದಯಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹಾಸನದಲ್ಲಿ ರಂಗಭೂಮಿ ಚಟುವಟಿಕೆ ಕ್ರಿಯಾಶೀಲವಾಗಿರುವಲ್ಲಿ ಸಣ್ಣೇಗೌಡರ ಪಾತ್ರ ಬಹಳ ಹಿರಿದು. ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕೃಷ್ಣೇಗೌಡರ ಆನೆ ಮತ್ತಿತರ ನಾಟಕಗಳನ್ನು ನಿರ್ದೇಶಿಸಿದ್ದರಲ್ಲದೆ, ಅವರು ನಿರ್ದೇಶನ ಮಾಡಿದ ನಾಟಕಗಳು ರಾಜ್ಯಮಟ್ಟದಲ್ಲೂ ಪ್ರಶಸ್ತಿ ಪಡೆದಿವೆ.