ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಇಂದು ಪ್ರತಿಭಟನೆ

Srinivasa Murthy VN
Updated On : 29 Aug 2013, 11:09 am

ಮೈಸೂರು: ಯುವರಾಜ ಕಾಲೇಜಿನ ಪ್ರಾಂಶುಪಾಲ ಡಾ.ಎಚ್. ನಂಜೇಗೌಡ ಅವರು 72 ಮಂದಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶ ಪ್ರಕಟಿಸದೆ ಅನ್ಯಾಯ ಮಾಡಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಹಾಗೂ ಪೊಲೀಸರ ದೌರ್ಜನ್ಯ ಖಂಡಿಸಿ ಕನ್ನಡ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಆ.30ರ ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸುವರು.

ಉಪನ್ಯಾಸ
ಮಹಾಜನ ವಿದ್ಯಾಸಂಸ್ಥೆ ಹಳೆಯ ವಿದ್ಯಾರ್ಥಿಗಳ ಸಂಘವು ಆ.31ರ ಸಂಜೆ 6ಕ್ಕೆ ಸಂಘದ ಆವರಣದಲ್ಲಿ ಕೃಷಿ ಸಂಸ್ಕೃತಿಯೋ, ಅಪರಾಧವೋ ಅಥವಾ ವ್ಯಾಪಾರವೋ ಎಂಬ ವಿಷಯದ ಬಗ್ಗೆ ನೈಸರ್ಗಿಕ ಕೃಷಿಕ ಎಂ.ಕೆ. ಕೈಲಾಶ್‌ಮೂರ್ತಿ ಅವರಿಂದ ಉಪನ್ಯಾಸ ಏರ್ಪಡಿಸಿದೆ.

ದಾಸೋಹ ಉಪನ್ಯಾಸ
ಜೆಎಸ್‌ಎಸ್ ಮಹಾವಿದ್ಯಾಪೀಠ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯು ಆ.31ರ ಸಂಜೆ 6ಕ್ಕೆ ಜೆಎಸ್‌ಎಸ್ ಆಸ್ಪತ್ರೆ ಆವರಣದ ರಾಜೇಂದ್ರ ಭವನದಲ್ಲಿ ಶಿವಾನುಭವ ದಾಸೋಹ- 190 ಉಪನ್ಯಾಸ ಏರ್ಪಡಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಮ.ಗು. ಸದಾನಂದಯ್ಯ ಉಪನ್ಯಾಸ ನೀಡುವರು.

ಆಯುರ್ವೇದ ಚಿಕಿತ್ಸೆ
ಶ್ರೀರಂಗ ಆಯುರ್ವೇದ ಚಿಕಿತ್ಸಾ ಮಂದಿರವು ಆ.31 ರಂದು ಡಾ. ಶ್ವೇತಾ ಅವರಿಂದ ಚರ್ಮ ಸಂಬಂಧಿ ಆರೋಗ್ಯ ಸಮಸ್ಯೆಗಳಿಗೆ ಮತ್ತು ಡಾ.ಜಿತೇಂದ್ರ ಅವರು ಉಸಿರಾಟದ ಸಮಸ್ಯೆಗಳಿಗೆ ಆಯುರ್ವೇದ ಚಿಕಿತ್ಸೆ ನೀಡುವರು. ಶ್ರೀರಂಗ ಆಯುರ್ವೇದ ಚಿಕಿತ್ಸಾ ಮಂದಿರ, ನಂ.1551, ಸಿ ಮತ್ತು ಡಿ ಬ್ಲಾಕ್‌ನ, ಕುವೆಂಪುನಗರ ಇಲ್ಲಿ ಅಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ಶಿಬಿರ ನಡೆಯಲಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ. 7899869385 ಸಂಪರ್ಕಿಸಬಹುದು.

ಪದವಿ ಪ್ರದಾನ
ಎನ್‌ಐಇ ವಿದ್ಯಾ ಸಂಸ್ಥೆಯು ಆ.31ರ ಬೆಳಗ್ಗೆ 10.30ಕ್ಕೆ ಕಾಲೇಜಿನ ವಜ್ರಮಹೋತ್ಸವ ಸಭಾಂಗಣದಲ್ಲಿ ತೃತೀಯ ಪದವಿ ಪ್ರದಾನ ಸಮಾರಂಭ ಆಯೋಜಿಸಿದೆ. ಸುಮಾರು 700 ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಪದವಿ ಪತ್ರ ಪ್ರದಾನ ಮಾಡಲಾಗುವುದು. ಒಟ್ಟು 29 ಎಂಜಿನಿಯರಿಂಗ್, 9 ಎಂಟೆಕ್ ಮತ್ತು 3 ಎಂಸಿಎ ವಿಭಾಗದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಚಿನ್ನದ ಪದಕ ಪಡೆಯಲಿದ್ದಾರೆ. 32 ಮಂದಿ ವಿದ್ಯಾರ್ಥಿಗಳು ದತ್ತಿ ಪ್ರಶಸ್ತಿ ಪಡೆಯುವರು.

ಪುಸ್ತಕ ವಿತರಣೆ

ಶಾಸ್ತ್ರೀ ಫೌಂಡೇಶನ್ ಸಂಸ್ಥೆಯು ಆ.31ರ ಮಧ್ಯಾಹ್ನ 3ಕ್ಕೆ ರಮಾವಿಲಾಸ ರಸ್ತೆಯ ಸೀತಾರಾಮ ದೇವಸ್ಥಾನದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಬ್ಯಾಗ್, ಅಂಗವಿಕಲರಿಗೆ ಉಪಕರಣ ವಿತರಣಾ ಕಾರ್ಯಕ್ರಮ ಆಯೋಜಿಸಿದೆ. ಶಾಸಕ ಎಂ.ಕೆ. ಸೋಮಶೇಖರ್, ಪಾಲಿಕೆ ಸದಸ್ಯ ಪ್ರಶಾಂತ್, ಪತ್ರಿಕೋದ್ಯಮಿ ರಾಜಶೇಖರ ಕೋಟಿ ಮುಖ್ಯ ಅತಿಥಿಯಾಗಿ ಆಗಮಿಸುವರು ಎಂದು ಸಂಸ್ಥೆಯ ವ್ಯವಸ್ಥಾಪಕ ಬಿ.ಎಲ್. ನಾಗೇಂದ್ರಪ್ರಸಾದ್ ತಿಳಿಸಿದ್ದಾರೆ.

ಕಥೆ ಕೇಳೋಣ

ಜಯಲಕ್ಷ್ಮೀಪುರಂ ಆದರ್ಶ ಬಳಗವು ಆ.31ರ ಸಂಜೆ 4.30ಕ್ಕೆ ಜಯಲಕ್ಷ್ಮೀಪುರಂ 4ನೇ ಮುಖ್ಯರಸ್ತೆಯ ಸೌಜನ್ಯ ನಿವಾಸದಲ್ಲಿ ಮಕ್ಕಳಿಗಾಗಿ ಕತೆ ಹೇಳುವ ಕಾರ್ಯಕ್ರಮ ಆಯೋಜಿಸಿದೆ. ಕಲಾಸುರುಚಿಯು ಆ. 31ರ ಸಂಜೆ 4.30ಕ್ಕೆ ಕುವೆಂಪುನಗರದ ಚಿತ್ರಭಾನು ರಸ್ತೆಯ ಸುರುಚಿ ರಂಗಮನೆಯಲ್ಲಿ ಕತೆ ಕೇಳೋಣ ಬನ್ನಿ ಕಾರ್ಯಕ್ರಮ ಆಯೋಜಿಸಿದೆ. ಉಪನ್ಯಾಸಕಿ ಕೆ.ಆರ್. ಸುಮತಿ ಕತೆ ಹೇಳುವರು. ಹೆಚ್ಚಿನ ಮಾಹಿತಿಗೆ ದೂ. 2541795 ಸಂಪರ್ಕಿಸಿ.

ಪ್ರಬಂಧ ಸ್ಪರ್ಧೆ

ಶ್ರೀ ಚಾಮರಾಜೇಂದ್ರ ಮೃಗಾಲಯವು ಸೆ.3ರ ಬೆಳಗ್ಗೆ 11 ರಿಂದ ಮಧ್ಯಾಹ್ನ 12ರವರೆಗೆ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ. ಸ್ಪರ್ಧೆಗೆ ಅರ್ಜಿ ಸಲ್ಲಿಸಲು ಆ.31 ಕಡೆಯದಿನ. ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನೀರು ಅರಣ್ಯದ ಉತ್ಪನ್ನ ಕುರಿತು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅರಣ್ಯೇತರ ಮತ್ತು ಅರಣ್ಯ ಪ್ರದೇಶದಲ್ಲಿನ ಸಂರಕ್ಷಣೆ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ.

ಪ್ರಭಾಕರ ನೇಮಕ
ಕೆ.ಆರ್. ನಗರ:
ಗ್ರಾಮಾಂತರ ಬಿಜೆಪಿ ಕಾರ್ಯದರ್ಶಿಯನ್ನಾಗಿ ಕೆ.ಆರ್. ನಗರ ತಾಲೂಕಿನ ಹಂಪಾಪುರ ಗ್ರಾಮದ ಎಚ್.ಡಿ. ಪ್ರಭಾಕರ ಅವರನ್ನು ನೇಮಕ ಮಾಡಲಾಗಿದೆ ಎಂದು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಎ. ಹೇಮಂತ್ ಕುಮಾರಗೌಡ ತಿಳಿಸಿದ್ದಾರೆ.

ವಿಶೇಷ ಪೂಜಾ ಮಹೋತ್ಸವ
ಎಚ್.ಡಿ. ಕೋಟೆ:
ತಾಲೂಕಿನ ಹಂಪಾಪುರ ಹೋಬಳಿಯ ಕಂಚಮಳ್ಳಿ ಗೇಟ್‌ನ ಮಹದೇವನಗರದಲ್ಲಿರುವ ಶ್ರೀ ಕ್ಷೇತ್ರ ಶನೈಶ್ಚರಸ್ವಾಮಿ ದೇವಸ್ಥಾನದಲ್ಲಿ ಆ.31ರಂದು ಕಡೆ ಶ್ರಾವಣ ಶನಿವಾರದಂದು ವಿಶೇಷ ಪೂಜಾ ಮಹೋತ್ಸವ ನಡೆಯಲಿದೆ. ಅಂದು ಬೆಳಗ್ಗೆ ನವಗ್ರಹಣ ಪೂಜೆ, ಬೆಳ್ಳಿ ವಿಗ್ರಹಮೂರ್ತಿ ಮೆರವಣಿಗೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments