ಸೆ.1ಕ್ಕೆ ಆದಿವಾಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಚಾಲನೆ
ಕ.ಪ್ರ.ವಾರ್ತೆ ಮೈಸೂರು ಆ. 29
ಡೀಡ್ ಸಂಸ್ಥೆಯು ತನ್ನ 35ನೆ ವಾರ್ಷಿಕೋತ್ಸವ ಮತ್ತು ಆದಿವಾಸಿ ಮಾನವ ಸಂಪನ್ಮೂಲ ಅಭಿವೃದ್ಧಿ ತರಬೇತಿ ಕೇಂದ್ರದ ಪ್ರಾರಂಭೋತ್ಸವವನ್ನು ಸೆ.1ರ ಬೆಳಗ್ಗೆ 10.30ಕ್ಕೆ ಚಿಕ್ಕ ಹುಣಸೂರಿನ ಡೀಡ್ ಸಂಸ್ಥೆ ಆವರಣದಲ್ಲಿ ಆಯೋಜಿಸಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಹಿ.ಚಿ. ಬೋರಲಿಂಗಯ್ಯ ಸಮಾರಂಭ ಉದ್ಘಾಟಿಸುವರು. ಬಿರ್ಸಾಮುಂಡಾ ಭಾವಚಿತ್ರಕ್ಕೆ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಕೆ.ಎಂ. ಚಂದ್ರೇಗೌಡ ಪುಷ್ಪಾರ್ಚನೆ ಮಾಡುವರು. ಡಾ.ಜೆರ್ರಿ ಪೈಸ್ ಮತ್ತು ಡಾ. ಕ್ರಿಸ್ಟಿಲ್‌ಡಾ ಪೈಸ್ ನೂತನ ಕಟ್ಟಡ ಉದ್ಘಾಟಿಸುವರು.
ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಮುಜಾಫರ್ ಆಸಾದಿ ನಾಮಫಲಕ ಅನಾವರಣ ಮಾಡುವರು ಎಂದು ಡೀಡ್ ಸಂಸ್ಥೆ ನಿರ್ದೇಶಕ ಎಸ್.ಶ್ರೀಕಾಂತ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿರಿಯ ಚಿಂತಕ ಪ್ರೊ.ಎಚ್. ಗೋವಿಂದಯ್ಯ ಪುಸ್ತಕ ಬಿಡುಗಡೆ ಮಾಡಲಿದ್ದು, ಟಿಡಿಎಚ್‌ನ ಸಂಯೋಜಕ ಪಿ.ಈ. ರೆಜಿ ಹಂಬಲ ವಿಶೇಷ ಸಂಚಿಕೆ ಬಿಡುಗಡೆ ಮಾಡುವರು. ಗಿಡಮೂಲಿಕೆ ತಜ್ಞೆ ಮಾಸ್ತಮ್ಮ ಗಿಡ ನೆಡುವರು.
ಡೀಡ್ ಸಂಸ್ಥೆ ಅಧ್ಯಕ್ಷ ಎಸ್.ಎಲ್. ನಿಂಗರಾಜಪ್ಪ ಅಧ್ಯಕ್ಷತೆ ವಹಿಸುವರು. ವಿಶೇಷ ಆಹ್ವಾನಿತರಾಗಿ ಗಿರಿಜನ ಕ್ರಿಯಾಕೂಟದ ರಾಯ್ ಡೇವಿಡ್, ಜಿ.ಎಸ್. ರಾಜೇಗೌಡ, ನಂಜುಂಡಯ್ಯ, ಬಿ. ಶಿವರಾಜೇಗೌಡ, ಮಲ್ಲೇಶ್, ಚಕ್ರವರ್ತಿ, ಪ್ರಸನ್ನಮೂರ್ತಿ, ಮೈತ್ರಿ ಸಂಸ್ಥೆಯ ಚಾಯ್ ಮಾಲೀಕಲ್, ಪರಶು, ಸ್ಟ್ಯಾನ್ಲಿ, ಡಾ. ಮೋಹನ್ ಕೋಟೆಕೆರೆ, ಲೋಚನ, ಸಿಸ್ಟರ್ ಆಲೀಸ್ ಭಾಗವಹಿಸುವರು ಎಂದರು.
ಆದಿವಾಸಿ ಭಾಷೆ, ಸಂಸ್ಕೃತಿ, ಪರಂಪರೆ ಮತ್ತು ನಾಗರಿಕತೆ ಕುರಿತು ಅಧ್ಯಯನ ನಡೆಸಲು ರಾಜ್ಯದಲ್ಲಿ ಕೂಡಲೆ ಆದಿವಾಸಿ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಆದಿವಾಸಿ ಅಭಿವೃದ್ಧಿ ನಿಗಮ ತೆರೆಯಬೇಕು, ಮಹಿಳಾ ಬ್ಯಾಂಕ್ ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಶಿವಣ್ಣ, ನಾಗರಹೊಳೆ ಬುಡಕಟ್ಟು ಹಕ್ಕು ಸ್ಥಾಪನಾ ಸಮಿತಿ ಸಂಚಾಲಕ ಪಿ.ಕೆ. ರಾಮು ಇದ್ದರು.