ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬರ ದೂರಾಗುವ ದೃಷ್ಟಿಯಿಂದ ಜಲಪಾತೋತ್ಸವ

Srinivasa Murthy VN
Updated On : 31 Aug 2013, 11:39 am

ಕ.ಪ್ರ.ವಾರ್ತೆ ಕೊಳ್ಳೇಗಾಲ ಆ. 31
ಬರಗಾಲ ದೂರವಾಗಿ ಜನ ಶಾಂತಿ ನೆಮ್ಮದಿಯಿಂದ ಜೀವನ ನಡೆಸಲು ಅವಕಾಶವಾಗಲಿ ಎಂಬ ಶುಭಸೂಚಕವಾಗಿ ಸರ್ಕಾರ ಭರಚುಕ್ಕಿಯಲ್ಲಿ ಜಲಪಾತೋತ್ಸವ ನಡೆಸುತ್ತಿದೆ ಎಂದು ಸಹಕಾರ ಹಾಗೂ ಚಾ.ನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್.ಮಹದೇವಪ್ರಸಾದ್ ಹೇಳಿದರು.
ಅವರು ತಾಲೂಕಿನ ಭರಚುಕ್ಕಿಯಲ್ಲಿ ಅಯೋಜಿಸಲಾಗಿದ್ದ ಜಲಪಾತೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಭರಚುಕ್ಕಿಯಲ್ಲಿ 2007ರಲ್ಲಿ ಎರಡು ದಿನಗಳ ಕಾಲ ಯಶಸ್ವಿಯಾಗಿ ಜಲಪಾತೋತ್ಸವ ನಡೆಸಲಾಗಿತ್ತು. ನಂತರ ಉತ್ಸವ ನಡೆಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಮಳೆ ಬಂದು ನದಿ ತುಂಬಿ ಹರಿದ ಪರಿಣಾಮ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಬರಗಾಲ ದೂರಾಗಲಿ ಎಂಬ ಹಾರೈಕೆಯೊಂದಿಗೆ ಉತ್ಸವ ಅಯೋಜಿಸಿದೆ ಎಂದರು.
ಪ್ರಾಕೃತಿಕ ಸಂಪತ್ತು ಹೊಂದಿರುವ ಈ ಸ್ಥಳವನ್ನು ದೇಶ-ವಿದೇಶಗಳಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಉತ್ಸವ ನಡೆಸಲಾಗುತ್ತಿದೆ. 1 ತಿಂಗಳ ಹಿಂದೆ ಉತ್ಸವ ನಡೆಸಿದ್ದರೆ ಪ್ರವಾಸಿಗರು ಇನ್ನು ಹೆಚ್ಚಿನ ವೈಭವ-ಸೊಬಗು ಸವಿಯಬಹುದಿತ್ತು ಎಂದರು. ಸರ್ಕಾರದಿಂದ ಈ ಬಾರಿ 347 ಕೋಟಿ ಪ್ರವಾಸೋದ್ಯಮ ಅಭಿವೃದ್ಧಿಗೆ ಬಿಡುಗಡೆಯಾಗಿದೆ. ಚಾ.ನಗರಕ್ಕೆ 17 ಕೋಟಿ ಬಿಡುಗಡೆಯಾಗಿದೆ. ಪ್ರವಾಸೋದ್ಯಮದ ಹೆಬ್ಬಾಗಿಲಿನಂತಿರುವ ಭರಚುಕ್ಕಿ ಜಲಪಾತ ಪ್ರದೇಶವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುತ್ತೇವೆ ಎಂದರು.  
ಸೇತುವೆ ನಿರ್ಮಾಣ: ವಿದ್ಯುತ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಲೋಕೋಪಯೋಗಿ ಸಚಿವ ಎಚ್.ಸಿ ಮಹದೇವಪ್ಪ ಮಾತನಾಡಿ, ಜಿಲ್ಲೆಯ ಪ್ರಕೃತಿ ಸೊಬಗಿನ ನಡುವೆ 2 ಪ್ರಸಿದ್ಧ ಜಲಪಾತಗಳಿದ್ದು ಇಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಕಾವೇರಿ ನದಿಗೆ ಅಡ್ಡಲಾಗಿ ಮತ್ತೊಂದು ಸೇತುವೆ ನಿರ್ಮಿಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ನಾಗಶ್ರೀ ಪ್ರತಾಪ್  ಪ್ರವಾಸಿ ಸಾಹಿತ್ಯವನ್ನು ಬಿಡುಗಡೆ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement