ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಡಾ. ಸಲೀಂ ನೂತನ ಪೊಲೀಸ್ ಆಯುಕ್ತ

Srinivasa Murthy VN
Updated On : 4 Jul 2013, 12:21 pm

ಕ.ಪ್ರ.ವಾರ್ತೆ ಮೈಸೂರು ಜು. 3
ಮೈಸೂರು ನಗರದ 16ನೇ ಪೊಲೀಸ್ ಆಯುಕ್ತರಾಗಿ ಡಾ.ಮಹಮ್ಮದ್ ಅಬ್ದುಲ್ಲಾ ಸಲೀಂ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಪೊಲೀಸ್ ಆಯುಕ್ತ ಕೆ.ಎಲ್. ಸುಧೀರ್ ಅವರು ಡಾ. ಸಲೀಂ ಅವರಿಗೆ ಅಧಿಕಾರ ವಹಿಸಿಕೊಟ್ಟರು.
ನಂತರ ಮಾತನಾಡಿದ ಡಾ. ಸಲೀಂ, ಶಾಂತಿಪ್ರಿಯ ಮೈಸೂರಿನ ಜನರ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ಸಂತೋಷವಾಗಿದೆ. 1997- 98ರಲ್ಲಿ ಡಿಸಿಪಿಯಾಗಿ ಕಾರ್ಯ ನಿರ್ವಹಿಸಿದ್ದು, ಈಗ ಆಯುಕ್ತನಾಗಿ ಬಂದಿದ್ದೇನೆ. ಬದಲಾದ ಸ್ಥಿತಿಯ ಸಮಸ್ಯೆಗಳ ಅರಿತು ಕೆಲಸ ಮಾಡುವುದಾಗಿ ಹೇಳಿದರು. ಹೊಣೆಗಾರಿಕೆ ಮತ್ತು ಪಾರದರ್ಶಕ ಕೆಲಸ ಮಾಡುತ್ತೇನೆ. ಇದಕ್ಕೆ ಸಾರ್ವಜನಿಕರು ಮತ್ತು ಎಲ್ಲರ ಸಹಕಾರ ಅಗತ್ಯ. ಸ್ಥಳಾವಕಾಶಕ್ಕಿಂತ ವಾಹನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸಂಚಾರ ಸಮಸ್ಯೆ ಉಂಟಾಗುತ್ತಿದೆ. ಸಾಮಾಜಿಕ ತಾಣ ಬಳಸಿಕೊಂಡು ಕಾರ್ಯ ನಿರ್ವಹಿಸಲು ಚಿಂತಿಸಿರುವುದಾಗಿ ತಿಳಿಸಿದರು. ಡಿಸಿಪಿಗಳಾದ ಬಸವರಾಜ ವೈ. ಮಾಲಗತ್ತಿ, ಕೆ.ಪಿ. ಭೀಮಯ್ಯ, ಪ್ರಭಾಶಂಕರ, ಎಸಿಪಿಗಳಾದ ಟಿ.ಸಿ. ನಾಗರಾಜ, ನಾಗಪ್ಪ, ಕೆ.ಪಿ. ಅಂಜಲಿ, ವಿಷ್ಣುವರ್ಧನ ಇದ್ದರು.

ಡಾ. ಸಲೀಂ ಪರಿಚಯ
ಡಾ. ಸಲೀಂ ಅವರು ಎಂ.ಕಾಂ ಪದವಿಧರರಾಗಿದ್ದು, 1993 ರಲ್ಲಿ ಐಪಿಎಸ್ ತೇರ್ಗಡೆಯಾಗಿದ್ದಾರೆ. ಗುಲ್ಬರ್ಗ ಎಎಸ್ಪಿಯಾಗಿ ವೃತ್ತಿ ಆರಂಭಿಸಿದ ಅವರು, ಬೆಳಗಾವಿ, ಕೊಡಗು, ಶಿವಮೊಗ್ಗದ ಸಾಗರ, ಮೈಸೂರು, ಉಡುಪಿ, ಹಾಸನ, ಬೆಂಗಳೂರಿನಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಈ ನಡುವೆ ಸಂಚಾರ ನಿರ್ವಹಣೆ ವಿಷಯದಲ್ಲಿ ಸಂಧೋಧನೆ ನಡೆಸಿ ಬೆಂಗಳೂರು ವಿವಿಯಿಂದ ಪಿ.ಎಚ್‌ಡಿ ಪದವಿ ಪಡೆದಿದ್ದಾರೆ.

ಅಗ್ನಿಶಾಮಕ ದಳದ ನಿರ್ದೇಶಕರ ಹುದ್ದೆಗೆ ನನ್ನನ್ನು ವರ್ಗಾಯಿಸಲಾಗಿದೆ. ಶಾಂತಿಪ್ರಿಯರಾದ ಮೈಸೂರಿನ ಜನರ ಸೇವೆ ಮಾಡಲು ಉತ್ತಮ ಅವಕಾಶ ಸಿಕ್ಕಿತ್ತು. ನನ್ನ ಅಧಿಕಾರದ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.
- ಕೆ.ಎಲ್. ಸುಧೀರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement