ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಚಾಮರಾಜ ಎಡದಂಡೆ ನಾಲೆಗೆ ನೀರು

Srinivasa Murthy VN
Updated On : 22 Jul 2013, 11:17 am

ಕ.ಪ್ರ.ವಾರ್ತೆ ಸಾಲಿಗ್ರಾಮ ಜು. 22
ಕೆ.ಆರ್. ನಗರ ತಾಲೂಕಿನ ಸುಮಾರು 35 ಸಾವಿರಕ್ಕೂ ಹೆಚ್ಚು ಎಕರೆ ಜಮೀನಿಗೆ ನೀರು ಒದಗಿಸುವ ಚಾಮರಾಜ ಬಲದಂಡೆ ಮತ್ತು ಎಡದಂಡೆ, ಮಿರ್ಲೆ ಹತ್ತಿಕಟ್ಟೆ ನಾಲೆ, ರಾಮಸಮುದ್ರ ನಾಲೆಗಳಿಗೆ ಕಾವೇರಿ ನದಿಯಿಂದ ನೀರು ಬಿಡುವ ಕಾರ್ಯಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು ಸಾಂಕೇತಿಕವಾಗಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಸೋಮವಾರ ಎಇಇ ಬಸವರಾಜು, ಕೆ.ಬಿ. ಪ್ರಕಾಶ್, ನರಸೇಗೌಡ ಅವರು ತಾಲೂಕಿನ ಬಳ್ಳೂರು ಸಮೀಪ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟೆಗೆ ಬಾಗಿನ ಅರ್ಪಿಸುವ ಮೂಲಕ ಕ್ರಸ್ಟ್‌ಗೇಟ್ ತೆರೆದು ಚಾಮರಾಜ ಎಡದಂಡೆ ನಾಲೆಗೆ ನೀರು ಹರಿಸಿ, ರೈತರಿಗೆ ಶುಭಾಶಯ ಕೋರಿದರು.
ಈ ವೇಳೆ ಮಾತನಾಡಿದ ಎಇಇ ಬಸವರಾಜು, ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿದೆ. ನೀರಿನ ಅಭಾವ ಕಡಿಮೆಯಾಗಿದೆ.  ನೀರಿನ ಕೊರತೆ ಕಂಡುಬಂದಿಲ್ಲ ಎಂದರು. ಈ ಎಲ್ಲಾ ನಾಲೆಯ ಆಧುನೀಕರಣ ಕಾಮಗಾರಿ ಶೇ.65ರಷ್ಟು ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಮುಂದಿನ ಜನವರಿ 15ರ ನಂತರ ಪ್ರಾರಂಭಿಸಿ ಪೂರ್ಣಗೊಳಿಸಲಾಗುವುದು. ರೈತರು ನೀರಿಗಾಗಿ ನಾಲೆ ಏರಿ ಒಡೆಯುವುದು ನಾಲೆಯ ತೂಬುಗೇಟ್‌ನ್ನು ನಾಶಪಡಿಸುವುದು ಮಾಡಿದರೆ ನೀರಾವರಿ ಕಾಯ್ದೆ ಪ್ರಕಾರ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಎಂಜಿನಿಯರ್‌ಗಳಾದ ಗಳಿಗೆಕೆರೆ ಸಿದ್ದೇಶ್ವರಪ್ರಸಾದ್, ಎ.ಪುಟ್ಟಸ್ವಾಮಿ, ಪ್ರಕಾಶ್, ಚಂದ್ರಶೇಖರ್, ರವಿಕುಮಾರ್, ಶಂಕರೇಗೌಡ, ನಾಲೆ ಗುತ್ತಿಗೆದಾರರಾದ ನಾಗಪ್ಪ ಡಿ. ವಡ್ಡರ್, ರಾಧಾಕೃಷ್ಣ, ರಾಮಾನುಜಂ, ಮಧು, ಪ್ರಸನ್ನ, ಹರೀಶ್, ಪ್ರಸನ್ನ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement