ರೋಟರ್ಯಾಕ್ಟ್ ಕ್ಲಬ್ ಪದಗ್ರಹಣ
ಕ.ಪ್ರ.ವಾರ್ತೆ ಮೈಸೂರು ಜು. 22
ರೋಟರ್ಯಾಕ್ಟ್ ಕ್ಲಬ್ ಮೈಸೂರು ನಾರ್ಥ್ ಸಂಸ್ಥೆಗೆ 2013-14ನೇ ಸಾಲಿಗೆ ಆಯ್ಕೆಯಾದ ಪದಾಧಿಕಾರಿಗಳು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು.
ರೋಟರಿ ಉತ್ತರದ ಅಧ್ಯಕ್ಷ ಜಿ.ಶಿವಲಿಂಗಸ್ವಾಮಿ ಅವರು ನೂತನ ಅಧ್ಯಕ್ಷೆ ಹೇಮಶ್ರೀ ಅವರಿಗೆ ಪದವಿ ಪ್ರದಾನ ಮಾಡಿದರು. ಉಪಾಧ್ಯಕ್ಷರಾಗಿ ಎಸ್.ಬಿ. ಪರಶಿವಮೂರ್ತಿ, ಜಂಟಿ ಕಾರ್ಯದರ್ಶಿಯಾಗಿ ಎಸ್. ಸೌಮ್ಯ, ಪಿ. ನಿಖಿತ, ಮಂದಾರ ಸಂಪಾದಕರಾಗಿ ಶ್ರುತಿ, ಪಲ್ಸ್ ಪೊಲೀಯೋ ಅಧ್ಯಕ್ಷರಾಗಿ ಎಲ್. ಚನ್ನಬಸವರಾಜು, ಕ್ರೀಡಾ ನಿರ್ದೇಶಕರಾಗಿ ಶಿವರಾಜ್ ರಾವ್, ಸಮಿತಿ ಸದಸ್ಯರಾದ ಆಯುಷ್ಮನ್, ಶಿವು, ಕೆಂಪೇಗೌಡ, ರಾಮಾರಾಧ್ಯ, ಜಹದೀಶ್, ಎಲ್.ಆರ್. ಮಹದೇವಸ್ವಾಮಿ, ಷಣ್ಮುಖ್, ಜಿಯಾವುಲ್ಲಾ ಷರೀಫ್, ರಾಘವೇಂದ್ರ ಸತ್ಯಗಿರಿ ಅಧಿಕಾರ ಸ್ವೀಕರಿಸಿದರು.
ಇದೇ ವೇಳೆ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೇಘನಾ ಹಾಗೂ ದ್ವಿತೀಯ ಪಿಯುಸಿಯ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕ ಗಳಿಸಿದ ಸುಶ್ಮಿತಾ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ರೋಟರ್ಯಾಕ್ಟ್ ಪ್ರತಿನಿಧಿ ರಾಜೀವ್, ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್, ಮಾಜಿ ಪ್ರತಿನಿಧಿ ಎಲ್. ಬಸವರಾಜು, ಕಾರ್ಯದರ್ಶಿ ಮಹದೇವಪ್ಪ, ಸಭಾಪತಿ ಕೆಂಪೇಗೌಡ ಇದ್ದರು.