ತಾ. ಪತ್ರಕರ್ತರ ಸಂಘಕ್ಕೆ ಆಯ್ಕೆ
ಪಿರಿಯಾಪಟ್ಟಣ: ತಾಲೂಕು ಪತ್ರಕರ್ತರ ಸಂಘದ 2013- 14ನೇ ಸಾಲಿಗೆ ಅಧ್ಯಕ್ಷರನ್ನಾಗಿ ಎಚ್. ವೈ. ನಂಜುಂಡಸ್ವಾಮಿ ಅವರನ್ನು ಆಯ್ಕೆ ಮಾಡಲಾಯಿತು. ಪಿ.ಎಸ್. ವೀರೇಶ್ (ಗೌರವಾಧ್ಯಕ್ಷರು), ಬಿ.ಆರ್. ಗಣೇಶ್ ಮತ್ತು ವಸಂತ್ಕುಮಾರ್ (ಉಪಾಧ್ಯಕ್ಷರು), ಮುಕುಂದ (ಕಾರ್ಯದರ್ಶಿ), ಟಿ.ಜೆ. ಆನಂದ್ (ಸಹ ಕಾರ್ಯದರ್ಶಿ), ನವೀನ್ಕುಮಾರ್ (ಖಜಾಂಚಿ) ಹಾಗೂ ಇಂತಿಯಾಜ್ (ಕಚೇರಿ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿ ಇಂದು ಪ್ರತಿಭಟನೆ
ಪಿರಿಯಾಪಟ್ಟಣ: ರಾಜ್ಯ ಸರ್ಕಾರದ ಜಾರಿಗೆ ತರುವ ಕರ್ನಾಟಕ ಪಂಚಾಯತ್ರಾಜ್ (ತಿದ್ದುಪಡಿ) ವಿಧೇಯಕ 2013ಅನ್ನು ವಿರೋಧಿಸಿ ಬಿಜೆಪಿಯ ಗ್ರಾಪಂ ಸದಸ್ಯರ ಬೃಹತ್ ಪ್ರತಿಭಟನೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಜು. 25 ರ ಬೆಳಗ್ಗೆ 10ಕ್ಕೆ ಹಮ್ಮಿಕೊಂಡಿದೆ ಎಂದು ಬಿಜೆಪಿ ತಾ. ಅಧ್ಯಕ್ಷ ಆರ್.ಟಿ. ಸತೀಶ್ ಹೇಳಿದರು. ತಾಲೂಕಿನ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷರಾಗಿ ಬಸವರಾಜು ಆಯ್ಕೆ
ಎಚ್.ಡಿ. ಕೋಟೆ: ತಾಲೂಕಿನ ಜಿ.ಬಿ. ಸರಗೂರು ಗ್ರಾಪಂ ಅಧ್ಯಕ್ಷರಾಗಿ ಕೆ.ಎಂ. ಬಸವರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾಪಂ ಚುನಾವಣಾಧಿಕಾರಿಯಾಗಿ ತಾಪಂ ಇಒ ಡಿ.ಕೆ. ಲಿಂಗರಾಜು ಕಾರ್ಯನಿರ್ವಹಿಸಿದರು. ಸದಸ್ಯರಾದ ಬೋರೇಗೌಡ, ಬಿ. ಸ್ವಾಮಿಗೌಡ, ಅಶ್ವತ್ಥಕುಮಾರ್, ಶಿವರಾಜು, ಮುಖಂಡರಾದ ಬಿ. ನಟರಾಜ್, ಎಸ್.ಎಂ. ಸೋಮಶೇಖರ್, ಎಸ್. ಶ್ರೀಕೃಷ್ಣ, ರಾಮೇಗೌಡ, ಬಿ.ಪಿ. ನಾಗಣ್ಣ, ಎನ್. ನಾಗಣ್ಣ, ಇ. ಬಸವರಾಜು, ಈರೇಗೌಡ ಇದ್ದರು.
ತರಬೇತಿಗೆ ಅರ್ಜಿ
ಹುಣಸೂರು: ಹೈದರಾಬಾದ್ನ ಭಾರತೀಯ ಉದ್ಯೋಗಶೀಲತಾ ಅಭಿವೃದ್ಧಿ ನಿಗಮ, ರಾಷ್ಟ್ರೀಯ ಆಹಾರ ಸಂಸ್ಕರಣ ಮಿಷನ್ ಹಾಗೂ ರಾಜ್ಯ ಸರ್ಕಾರದ ಕೃಷಿ ಇಲಾಖೆ ಆಶ್ರಯದಲ್ಲಿ ಆಹಾರ ಸಂಸ್ಕರಣೆ ಬಗ್ಗೆ ಪಿಯುಸಿ ತೇರ್ಗಡೆ ಹೊಂದಿರುವವರಿಗೆ ಇಲ್ಲಿನ ಕಾಫಿವರ್ಕ್ಸ್ ರಸ್ತೆಯ ಮಹಿಳಾ ಸಮಾಜದ ಕಟ್ಟಡದಲ್ಲಿ ಆರು ವಾರಗಳ ಕಾಲ ಉಚಿತ ತರಬೇತಿ ನೀಡಲಾಗುವುದು. ಆಸಕ್ತರು ಜು. 22ರಿಂದ ನೋಂದಾಯಿಸಿಕೊಳ್ಳುತ್ತಿದ್ದಾರೆ. ಜು. 29 ರಿಂದ ತರಬೇತಿ ಆರಂಭವಾಗಲಿದ್ದು, ಮಾಹಿತಿಗಾಗಿ ಎ.ಆರ್. ಸುಧಾಮಣಿ, ಮೊ. 9964343799 ಸಂಪರ್ಕಿಸಬೇಕೆಂದು ಕೋರಿದ್ದಾರೆ.