ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕೊಪ್ಪ ಗ್ರಾಮದಲ್ಲಿ ಅನ್ನಭಾಗ್ಯಕ್ಕೆ ಚಾಲನೆ

Srinivasa Murthy VN
Updated On : 26 Jul 2013, 12:12 pm

ಬೈಲುಕುಪ್ಪೆ: ಇಲ್ಲಿಗೆ ಸಮೀಪದ ಕೊಪ್ಪ ಗ್ರಾಮದಲ್ಲಿ ಸಿಂಡಿಕೇಟ್ ಸಹಕಾರ ಸಂಘದ ಸಭಾಂಗಣದಲ್ಲಿ ಅನ್ನಭಾಗ್ಯ ಯೋಜನೆಗೆ ಸಿಂಡಿಕೇಟ್ ಸಹಕಾರ ಸಂಘದ ಅಧ್ಯಕ್ಷ ಕಲ್ಯಾಣಪ್ಪ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ಅಕ್ಕಿ ದುಬಾರಿಯಾಗಿರುವ ಈ ಕಾಲದಲ್ಲಿ, ರಾಜ್ಯದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ರು.ಗೆ ಒಂದು ಕೆ.ಜಿ.ಯಂತೆ ಕುಟುಂಬಕ್ಕೆ 30 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಗೆ ಜಾರಿಗೆ ತಂದಿರುವುದು ಬಡವರಿಗೂ, ದೀನ ದಲಿತರಿಗೂ ಹಾಗೂ ಹಿಂದುಳಿದ ವರ್ಗದವರಿಗೆ ಅನುಕೂಲವಾಗಿದೆ ಎಂದು ಹೇಳಿದರು. ಜಿಪಂ ಸದಸ್ಯ ಕಾವೇರಿ ಶೇಖರ್, ತಾಪಂ ಸದಸ್ಯ ನವಲೂರು ಮಹದೇವ, ಗ್ರಾಪಂ ಅಧ್ಯಕ್ಷೆ ಗಂಗಾಂಬಿಕೆ ಯೋಗೇಶ್, ಸಂಘದ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಜಿಪಂ ಮಾಜಿ ಸದಸ್ಯ ಚನ್ನಯ್ಯ, ಸಿಂಡಿಕೇಟ್ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಹದೇವಪ್ಪ, ಸುಬ್ರಮಣ್ಯ, ಶಂಕರಪ್ಪ, ಯಶವಂತಮ್ಮ, ಮುಕ್ಬಲ್ ಇತರರು ಇದ್ದರು.

ಸಿದ್ದಲಿಂಗಪುರದ ಮಹಿಳೆ ನಾಪತ್ತೆ
ಮೈಸೂರು:
ನಗರದ ಹೊರವಲಯದಲ್ಲಿರುವ ಸಿದ್ದಲಿಂಗಪುರ ಮಾರಿಗುಡಿ ರಸ್ತೆ ನಿವಾಸಿ ಕಮಲಮ್ಮ ಎಂಬವರು ಜೂ. 22ರಿಂದ ನಾಪತ್ತೆಯಾಗಿದ್ದಾರೆ.
  ಇವರು ಸಣ್ಣ- ಪುಟ್ಟ ಕೆಲಸ ಮಾಡಿಕೊಂಡಿದ್ದು, ಸಾಲ ತೀರಿಸಲು ಸಾಧ್ಯವಾಗದ ಕಾರಣ ಮನೆ ಬಿಟ್ಟು ಹೋಗಿದ್ದಾರೆ ಎಂದು ಕಮಲಮ್ಮ ಸಹೋದರ ರಘು ಪೊಲೀಸರಿಗೆ ದೂರು ನೀಡಿದ್ದಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮೊ. 8711088949 ಅಥವಾ ದೂ. 0821- 2418315 ಸಂಪರ್ಕಿಸಲು ಮೇಟಗಳ್ಳಿ ಠಾಣೆ ಪೊಲೀಸರು ಕೋರಿದ್ದಾರೆ.

ಅಪರಿಚಿತ ವೃದ್ಧ ಸಾವು
ಮೈಸೂರು:
ಅಸ್ವಸ್ಥಗೊಂಡು ಕೆ.ಆರ್. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.ಚಹರೆ- 60 ವರ್ಷ, 5.3 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2418306 ಸಂಪರ್ಕಿಸಲು ದೇವರಾಜ ಠಾಣೆ ಪೊಲೀಸರು ಕೋರಿದ್ದಾರೆ.

ಬಿಹಾರ ಮೂಲದ ಯುವತಿ ಆತ್ಮಹತ್ಯೆ
ಮೈಸೂರು:
ಬಿಹಾರ ರಾಜ್ಯದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಬ್ಬಾಳು ಕೈಗಾರಿಕ ಪ್ರದೇಶ ಬಳಿಯ ಮಹಾಲಕ್ಷ್ಮಿ ಬಡಾವಣೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ರಾಮಕುಮಾರ್ ಯಾದವ್ ಎಂಬವರ ಪುತ್ರಿ ರುಬಿಕುಮಾರಿ (18) ಆತ್ಮಹತ್ಯೆ ಮಾಡಿಕೊಂಡವರು.
 ರುಬಿಕುಮಾರಿ ಮತ್ತು ಈಕೆಯ ಸಹೋದರ ಅಮಿತ್‌ಕುಮಾರ್ ಇಬ್ಬರು ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಸಿಐಪಿಇಟಿ (ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಪ್ಲಾಸ್ಟಿಕ್ಸ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ) ಕಾಲೇಜಿನಲ್ಲಿ ಡಿಟಿಪಿ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳು. ಅಣ್ಣ- ತಂಗಿ ಇಬ್ಬರು ಮಹಾಲಕ್ಷ್ಮಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸ್ನೇಹಿತರೊಂದಿಗೆ ರುಬಿ ಪ್ರವಾಸಕ್ಕೆ ಹೋಗಲು ಅಮಿತ್ ಒಪ್ಪಿರಲಿಲ್ಲ. ಇದರಿಂದ ಮನನೊಂದ ರುಬಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮೇಟಗಳ್ಳಿ ಠಾಣೆ ಇನ್ಸ್‌ಪೆಕ್ಟರ್ ವಿವೇಕಾನಂದ, ಎಸ್‌ಐ ಶಿವಕುಮಾರ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜೂಜಾಟ: 12 ಮಂದಿ ಬಂಧನ
ಮೈಸೂರು:
ತಾಲೂಕಿನ ಟಿ. ನರಸೀಪುರ ರಸ್ತೆಯಲ್ಲಿರುವ ಮೊಸಂಬಾಯನಹಳ್ಳಿಯಲ್ಲಿ ಜೂಜಾಡುತ್ತಿದ್ದ 12 ಮಂದಿಯನ್ನು ಮೈಸೂರು ದಕ್ಷಿಣ ಠಾಣೆ ಪೊಲೀಸರು ಬುಧವಾರ ಸಂಜೆ ಬಂಧಿಸಿ, 7500 ವಶಪಡಿಸಿಕೊಂಡಿದ್ದಾರೆ. ಎಸ್‌ಐ ವೆಂಕಟೇಶಯ್ಯ ಮತ್ತು ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.

ವ್ಯಕ್ತಿ ನಾಪತ್ತೆ
ಮೈಸೂರು:
ಬೆಮಲ್ ಬಡಾವಣೆ ರಾಜರಾಜೇಶ್ವರಿ ನಗರ ನಿವಾಸಿ ವೈ.ಎನ್. ಮುಕುಂದ ಎಂಬವರ ತಂದೆ ವೈ.ಎಸ್. ನಾಗರಾಜು (80) ಬುಧವಾರ ಶೇವಿಂಗ್ ಮಾಡಿಸಲು ಹೋದವರು ನಾಪತ್ತೆಯಾಗಿದ್ದಾರೆ. ಚಹರೆ- 5.4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕನ್ನಡ ಮತ್ತು ಇಂಗ್ಲಿಷ್ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418123, 323 ಸಂಪರ್ಕಿಸಲು ಸರಸ್ವತಿಪುರಂ ಠಾಣೆ ಎಸ್‌ಐ ತಿಮ್ಮರಾಜು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement