ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗುಡಿ ಪ್ರಸನ್ನಗೆ ಅಭಿನಂದನೆ

Srinivasa Murthy VN
Updated On : 26 Jul 2013, 12:10 pm

ಭೇರ್ಯ: ತಾಲೂಕಿನ ಸರ್ಕಾರಿ ನೌಕರರ ಹಿತ ಕಾಪಾಡಲು ಬದ್ಧನಾಗಿದ್ದೇನೆ ಎಂದು ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮತ್ತು ಶಿಕ್ಷಕ ಡಿ.ವಿ. ಗುಡಿ ಪ್ರಸನ್ನ ಹೇಳಿದರು.
ಇಲ್ಲಿನ ಯುವ ಬಳಗ ಸಂಘದಿಂದ ನಡೆದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ತಾವು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದು, ಶಿಕ್ಷಕರ ಹಲವಾರು ಬೇಡಿಕೆಗಳನ್ನು ಈಡೇರಿಸಲು ಅಧ್ಯಕ್ಷರ ಚುನಾವಣೆ ಕಳೆದ ಮೇಲೆ ಮುಂದಿನ ಸಭೆಯಲ್ಲಿ ಚರ್ಚಿಸುವುದಾಗಿ ಹೇಳಿದರು.  ತಾಲೂಕಿನಲ್ಲಿ ಸರ್ಕಾರಿ ನೌಕರರ ಸಂಘ ನೆಪ ಮಾತ್ರಕ್ಕೆ ಸೀಮಿತವಾಗದೆ ಅಭಿವೃದ್ಧಿ ಕಾರ್ಯಮಾಡಲು ಹೋರಾಟ ಮಾಡುವುದಾಗಿ ತಿಳಿಸಿದರು. ಯುವ ಬಳಗದ ಅಧ್ಯಕ್ಷ ಲೋಕೇಶ್ ಮಾತನಾಡಿದರು. ಸೆಸ್ಕ್ ಎಂಜನಿಯರ್ ಸುರೇಶ್, ಗ್ರಾಪಂ ಉಪಾಧ್ಯಕ್ಷ ಬಿ.ಕೆ. ಕುಮಾರ್, ಗ್ರಾಪಂ ಸದಸ್ಯ ಬಿ.ಪಿ. ಪ್ರಕಾಶ್, ಸೋಮು, ವಕೀಲ ಸತೀಶ್, ಕಾಂಗ್ರೆಸ್ ಮುಖಂಡ ಜಯಕೀರ್ತಿ, ಹೋಟೆಲ್ ಉದ್ಯಮಿ ಕೃಷ್ಣಪೂಜಾರಿ, ಗ್ರಾಪಂ ಮಾಜಿ ಸದಸ್ಯ ಬಿ.ಕೆ. ಶಿವಕುಮಾರ್, ಸ್ನೇಹಿತರಾದ ಶೇಷಿರಾಜು, ಸಿಂ.ಕಾ. ಸುರೇಶ್, ಸಂಕನಹಳ್ಳಿ ಚಂದ್ರು, ಮುಂಜನಹಳ್ಳಿ ಜಯರಾಮೇಗೌಡ ಹಾರ ಹಾಕಿ ಶುಭ ಕೋರಿದರು.

ವೈದ್ಯಕೀಯ ಸೌಲಭ್ಯ ಕಲ್ಪಿಸಲು ಆಗ್ರಹ
ಎಚ್.ಡಿ. ಕೋಟೆ:
ತಾಲೂಕಿನ ವಿವಿಧ ಹಾಡಿಗಳಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸುವಂತೆ ಸಿಕ್ರಂ ಜಿಲ್ಲಾ ಮಾನವ ಹಕ್ಕುಗಳ ಕೇಂದ್ರ ಜಿಲ್ಲಾ ಸಂಯೋಜಕ ಪ್ರಸನ್ನ ಆಗ್ರಹಿಸಿದ್ದಾರೆ.
ಆದಿವಾಸಿಗಳು ವಾಸಿಸುವ ಹಾಡಿಗಳ ಸ್ಥಿತಿ ಚಿಂತಜನಕವಾಗಿದ್ದು, ಅನೈರ್ಮಲ್ಯ ಹೆಚ್ಚಾಗಿದೆ. ಜನರಿಗೆ ಆರೋಗ್ಯ ಸೇವೆ ಅಲಭ್ಯವಾಗಿದೆ. ಸಾಮಾಜಿಕ ವ್ಯವಸ್ಥೆ ಹಾಳುಗೆಡುವ ಮದ್ಯಪಾನ ಪ್ರಭಾವ ಬೀರಿರುವ ಹಿನ್ನೆಲೆಯಲ್ಲಿ ಹಾಡಿಗಳ ಜನರಲ್ಲಿ ಕ್ಷಯರೋಗ ಹಬ್ಬುತ್ತಿದೆ. ಆದ್ದರಿಂದ ಕೂಡಲೇ ವೈದ್ಯಕೀಯ ನೆರವು ಒದಗಿಸಬೇಕು ಎಂದು ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement