ನಾಳೆ ಪತ್ರಿಕಾ ದಿನಾಚರಣೆ
ಕೆ.ಆರ್. ನಗರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭವು ಜು. 27ರ ಬೆಳಗ್ಗೆ 11ಕ್ಕೆ ಇಲ್ಲಿನ ಐಎಂಎ ಭವನದಲ್ಲಿ ನಡೆಯಲಿದೆ. ಶಾಸಕ ಸಾ.ರಾ. ಮಹೇಶ್ ಸಮಾರಂಭ ಉದ್ಘಾಟಿಸುವರು. ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ದೀಪಕ್, ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ, ತಾ. ಬಿಜೆಪಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್ ಅಧ್ಯಕ್ಷತೆ ವಹಿಸುವರು.
ಸ್ವಚ್ಛತೆಗೆ ನಿರ್ಲಕ್ಷ್ಯ: ಆರೋಪ
ಟಿ. ನರಸೀಪುರ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಅಧ್ಯಕ್ಷರ ಬೇಜವಾಬ್ದಾರಿಯಿಂದ ಭೈರಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತಾ ನಿರ್ವಹಣೆ ನೆನೆಗುದಿಗೆ ಬಿದ್ದಿದೆ ಎಂದು ಪಂಚಾಯಿತಿ ಸದಸ್ಯ ಎಂ. ಮಿಥುನ್ ಆರೋಪಿಸಿದ್ದಾರೆ. ಪಂಚಾಯಿತಿಯ ಅಧ್ಯಕ್ಷರು ಸಮರ್ಥವಾಗಿ ಕಾರ್ಯನಿರ್ವಹಿಸದ್ದರಿಂದ ಬಡಾವಣೆಗಳ ಸ್ವಚ್ಛತೆ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಅಭಿವೃದ್ಧಿ ಅಧಿಕಾರಿಗಳಿಗೆ ಕಾಳಜಿ ಇಲ್ಲದ್ದರಿಂದ ಚರಂಡಿಗಳೆಲ್ಲವೂ ಗಬ್ಬೆದ್ದು ನಾರುತ್ತಿವೆ ಎಂದು ದೂರಿದ್ದಾರೆ. ಕಾಮಗಾರಿ ಕೈಗೊಂಡ ಒಳಚರಂಡಿ ಮಂಡಳಿ ರಸ್ತೆ ಅಗೆದು ಹಾಳು ಮಾಡಿದರೆ, ಹದಗೆಟ್ಟ ರಸ್ತೆ ಸರಿಪಡಿಸುವ ಪ್ರಯತ್ನ ಪಂಚಾಯಿತಿ ಮಾಡಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಅಧ್ಯಕ್ಷರು ಸ್ವಚ್ಛತೆ ನಿರ್ವಹಣೆಗೆ ಆದ್ಯತೆ ಕೊಟ್ಟು, ಚರಂಡಿ ಸ್ವಚ್ಛಗೊಳಿಸಬೇಕು ಹಾಗೂ ರಸ್ತೆಗಳನ್ನು ದುರಸ್ತಿಗೊಳಿಸಲು ಗಮನಹರಿಸಬೇಕು.ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಸಿಂಡಿಕೇಟ್‌ಗೆ ನೇಮಕ
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಸಂಸ್ಕೃತ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಬಿ.ಎ. ದೊಡ್ಡಮನಿ ಅವರನ್ನು ಒಂದು ವರ್ಷದ ಅವಧಿಗೆ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಕುಲಸಚಿವರು ತಿಳಿಸಿದ್ದಾರೆ.
ಬಿಜೆಪಿಗೆ ನೇಮಕ
ಮೈಸೂರು: ನಗರದ ಕೆ.ಆರ್. ಕ್ಷೇತ್ರ 1ನೇ ವಾರ್ಡ್‌ನ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎನ್. ಅಗ್ರಹಾರ ನಿವಾಸಿ ಟಿ.ಎಸ್. ಅರುಣ್ ಅವರನ್ನು ನೇಮಿಸಲಾಗಿದೆ ಎಂದು ಕ್ಷೇತ್ರದ ಬಿಜೆಪಿ ಅಧ್ಯಕ್ಷ ವಿ. ಸೋಮಸುಂದರ್ ತಿಳಿಸಿದ್ದಾರೆ.