ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಭ್ರಷ್ಟಾಚಾರ ವಿರುದ್ಧ ಡಂಗೂರ

Srinivasa Murthy VN
Updated On : 26 Jul 2013, 12:09 pm

ಮೈಸೂರು: ನಗರದ ವಿವಿಧ ಸರ್ಕಾರಿ ಇಲಾಖೆಯ ಭ್ರಷ್ಟಾಚಾರದ ವಿರುದ್ಧ ಕರ್ನಾಟಕ ಕಾವಲುಪಡೆ ಕಾರ್ಯಕರ್ತರು ನ್ಯಾಯಾಲಯದ ಎದುರಿನ ಮಹಾತ್ಮ ಗಾಂಧಿ ಪುತ್ಥಳಿ ಬಳಿ ಗುರುವಾರ ಕ್ರಾಂತಿಗೀತೆ ಹಾಡುವ ಮೂಲಕ ಡಂಗೂರ ಚಳವಳಿ ಹಮ್ಮಿಕೊಂಡಿದ್ದರು.
ಭ್ರಷ್ಟಾಚಾರ ಮಾಡಿ ಸಿಕ್ಕಿ ಬೀಳುವ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮದ ಹೆಸರಿನಲ್ಲಿ ಅಮಾನತು, ತನಿಖೆ, ಮೊಕದ್ದಮೆ ದಾಖಲಿಸಿದರೆ ಸಾಲದು. ಭ್ರಷ್ಟಾಚಾರ ಎಸಗಿ ಸಿಕ್ಕಿಬಿದ್ದ ಅಧಿಕಾರಿಗಳು ಜೈಲಿಗೆ ಹೋಗುತ್ತಾರೆ. ಬಿಡುಗಡೆಯಾದ ನಂತರ ಅದೇ ಜಾಗಕ್ಕೆ ಬಂದು ಕೂರುತ್ತಿದ್ದಾರೆ. ಭ್ರಷ್ಟ ಅಧಿಕಾರಿ ಮತ್ತು ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಂಡರೆ ಸಾಲದು, ಅಂಥವರಿಗೆ ಶಿಕ್ಷೆ ಕೂಡ ಆಗಬೇಕು ಎಂದು ಆಗ್ರಹಿಸಿದರು.
ಎಂಡಿಎ, ನಗರಪಾಲಿಕೆ, ಅರಮನೆ ಮಂಡಳಿ, ಆಹಾರ ಇಲಾಖೆಯಲ್ಲಿ ಅಕ್ರಮ ನಡೆದಿದೆ. ಪಾಲಿಕೆ ಮತ್ತು ಜಸ್ಕೋ ನಡುವೆ ಒಳ ಒಪ್ಪದಿಂದ ಆಗಿದೆ. ಚಾಮುಂಡಿಬೆಟ್ಟ ತಪ್ಪಲಿನಲ್ಲಿ ಭೂಮಿ ಕಬಳಿಸಲು ಸಂಚು ನಡೆದಿದೆ. ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಎಲ್ಲಾ ಅಧಿಕಾರಿಗಳನ್ನು 2 ವರ್ಷಗಳಿಗೊಮ್ಮೆ ಬೇರೆ ಬೇರೆ ಜಿಲ್ಲೆಗಳಿಗೆ ವರ್ಗಾಯಿಸಬೇಕು. ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕಾವಲುಪಡೆ ಕೊಡಗು ಸಂಸ್ಕೃತಿಕ ಘಟಕದ ಅಧ್ಯಕ್ಷ ವಿಜಯಕುಮಾರ್ ಮತ್ತು ತಂಡದವರು ಕ್ರಾಂತಿಗೀತೆ ಹಾಡಿದರು. ಕಾವಲುಪಡೆಯ ರಾಜ್ಯಾಧ್ಯಕ್ಷ ಎಂ. ಮೋಹನ್‌ಕುಮಾರ್‌ಗೌಡ,  ಟಿ. ರವಿಗೌಡ, ಶ್ರೀಕಾಂತ, ವಿಜಯಕುಮಾರ್, ಬಾಬು, ಸ್ವಾಮಿ, ರಘು, ಶಂಕರ್‌ನಾಗ್, ಸುನಿಲ್, ಸುರೇಶ್, ಚಂದ್ರಶೇಖರ್, ಮಹದೇವಸ್ವಾಮಿ, ನಟರಾಜ, ಕೃಷ್ಣೇಗೌಡಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement