ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಸಂಶೋಧನೆ ಫಲ ಹಳ್ಳಿಗರಿಗೂ ತಲುಪಲಿ'

Srinivasa Murthy VN
Updated On : 26 Jul 2013, 12:10 pm

ಕ.ಪ್ರ.ವಾರ್ತೆ ಮೈಸೂರು ಜು. 25
ವಾಕ್ ಮತ್ತು ಶ್ರವಣ ಸಮಸ್ಯೆ ಕುರಿತ ಎಷ್ಟೋ ಸಂಶೋಧನೆಯ ಫಲ ಗ್ರಾಮೀಣ ಪ್ರದೇಶಕ್ಕೆ ತಲುಪುವುದಿಲ್ಲ ಎಂದು ಮೈಸೂರು ವಿವಿ ಕುಲಸಚಿವ ಪ್ರೊ. ಸಿ. ಬಸವರಾಜು ಹೇಳಿದರು.
ಜೆಎಸ್‌ಎಸ್ ವಾಕ್ ಮತ್ತು ಶ್ರವಣ ಸಂಸ್ಥೆ ಗುರುವಾರ ರಾಜೇಂದ್ರ ಭವನದಲ್ಲಿ ಏರ್ಪಡಿಸಿದ್ದ ಧ್ವನಿಯ ಸ್ಪಷ್ಟತೆ ಮತ್ತು ಶ್ರವಣೇಂದ್ರಿಯದಿಂದ ಹೊರಹೊಮ್ಮುವ ವಿಭವವು ಮತ್ತು ಅದರ ಅನ್ವಯಗಳು ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವಾಕ್ ಮತ್ತು ಶ್ರವಣ ದೋಷಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಂಶೋಧನೆಯ ಫಲವಾಗಿ ಸುಧಾರಣೆಯಾಗಿದೆ. ಆದರೆ, ಈ ಎಲ್ಲಾ ಸಂಶೋಧನೆಯ ಫಲ ಗ್ರಾಮೀಣ ಪ್ರದೇಶಕ್ಕೆ ತಲುಪುತ್ತಿಲ್ಲ. ಆದ್ದರಿಂದ ವಾಕ್, ಶ್ರವಣ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಅವಕಾಶ ವಂಚಿತರಿಗೆ ಈ ಫಲ ದೊರೆಯುವಂತೆ ನೋಡಿಕೊಳ್ಳಬೇಕು ಎಂದರು.
ಶ್ರವಣ ದೋಷ ಉಪಕರಣಗಳು, ಧ್ವನಿಯಲ್ಲಿ ಬದಲಾವಣೆ ತರುವ ಮತ್ತು ಅಗತ್ಯ ಮಾರ್ಗದರ್ಶನ ನೀಡುವ ಸಂಶೋಧನೆಗಳು ನಗರ ಪ್ರದೇಶದಲ್ಲಿ ಮಾತ್ರ ಹೆಚ್ಚು ದೊರಕುತ್ತಿದೆ. ಆದರೆ, ಗ್ರಾಮೀಣರು ಇದರಿಂದ ದೂರ ಉಳಿದಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ವಾಕ್ ಸ್ವಾತಂತ್ರ್ಯ ನೀಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ಎಸ್‌ಆರ್‌ಸಿ ವಾಕ್ ಮತ್ತು ಶ್ರವಣ ಸಂಸ್ಥೆ ನಿರ್ದೇಶಕ ಪ್ರೊ. ಎಂ.ಎನ್. ನಾಗರಾಜ ತಾಂತ್ರಿಕ ಉಪನ್ಯಾಸ ನೀಡಿದರು. ಜೆಎಸ್‌ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್. ಮಹೇಶ್, ಸಂಸ್ಥೆಯ ನಿರ್ದೇಶಕ ಡಾ. ನಟರಾಜ್ ಇದ್ದರು.

ವಲಯ ಕಚೇರಿಗೆ ನಿಯೋಜಿಸಲು ಮನವಿ
ಮೈಸೂರು:
ಸ್ವರ್ಣಜಯಂತಿ ಯೋಜನೆಯ ಸಾಲಕ್ಕೆ ಸಂಬಂಧಿಸಿದ ಹಲವು ವಲಯಗಳ ಅಧಿಕಾರಿಗಳನ್ನು ಮುಖ್ಯ ಕಚೇರಿಗೆ ವರ್ಗಾಯಿಸಿದ್ದು, ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿರುವುದರಿಂದ, ಪುನಃ ಅವರನ್ನು ವಲಯ ಕಚೇರಿಗಳಿಗೆ ವರ್ಗಾಯಿಸುವಂತೆ ನಗರ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ವಿಭಾಗದ ಮಾಜಿ ಉಪಾಧ್ಯಕ್ಷ ಅಮನುಲ್ಲಾ ಶರೀಫ್ ನಗರಪಾಲಿಕೆಯ ಆಯುಕ್ತರಲ್ಲಿ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement